ಮೈಸೂರು: ಹಂಸಲೇಖ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಬ್ರಾಹ್ಮಣ ಯುವ ವೇದಿಕೆ ಪ್ರತಿಭಟನೆ

Update: 2021-11-18 18:18 GMT

ಮೈಸೂರು: ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ ಹಾಗೂ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಮತ್ತು ಶ್ರೀ ಕೃಷ್ಣ ಮಿತ್ರ ಮಂಡಳಿ ಹಾಗೂ ಶ್ರೀಕೃಷ್ಣ ಟ್ರಸ್ಟ್ ಹಾಗೂ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಸಂಘ ವತಿಯಿಂದ ಟಿ ಕೆ ಲೇಔಟ್ ನಲ್ಲಿರುವ ಕೃಷ್ಣಧಾಮ ಮುಂಭಾಗ ಹಂಸಲೇಖ ಹೇಳಿಕೆ ಖಂಡಿಸಿ ಘೋಷಣೆ ಕೂಗಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರು ಹಂಸಲೇಖ ವಿರುದ್ಧ ಕ್ರಮ ಕೈಗೊಂಡು ಬಂಧಿಸುವಂತೆ ಒತ್ತಾಯಿಸಿ ಸರಸ್ವತಿಪುರಂ ಪೊಲೀಸ್ ಠಾಣೆಗೆ ದೂರನ್ನು ನೀಡಿದರು. 

ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ. ಪ್ರಕಾಶ್ ಮಾತನಾಡಿ, ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಹಂಸಲೇಖ ಅವರು ಅಶುದ್ಧ ಶಬ್ದಗಳನ್ನು ಪ್ರಯೋಗಿಸಿ ಪೇಜಾವರ ಶ್ರೀಗಳನ್ನು ನಿಂದಿಸಿದ್ದಾರೆ. ಅದಲ್ಲದೆ ಹಿಂದೂಗಳ ಧಾರ್ಮಿಕ ಭಾವನೆ ಬಿಳಿಗಿರಿಯ ರಂಗನಾಥ ಸ್ವಾಮಿ ಪೂಜಾ ಕೈಂಕರ್ಯದ ಕುರಿತು ಹಿಂದೂ ಸಂಪ್ರದಾಯಗಳ ಕುರಿತು ಅವಹೇಳನ ಮಾಡಿರುವುದು ಖಂಡನೀಯ. ಇದರ ಬಗ್ಗೆ ಹಂಸಲೇಖ ಸಾರ್ವಜನಿಕವಾಗಿ ಬಂದು ಕ್ಷಮಾಪಣೆ ಕೇಳಬೇಕು. ಕೇಳದಿದ್ದ ಸಂದರ್ಭದಲ್ಲಿ ಇನ್ನಷ್ಟು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕದಡುವ ಸಂದರ್ಭವಾಗಲಿದೆ. ಪೊಲೀಸರು ಗಂಗರಾಜು ಹಂಸಲೇಖರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಇಳೈ ಆಳ್ವಾರ್ ಸ್ವಾಮೀಜಿ , ಬ್ರಾಹ್ಮಣ ಸಂಘದ  ಗ್ರಾಮಾಂತರ ಅಧ್ಯಕ್ಷ ರಾದ ಗೋಪಾಲ್ ರಾವ್ ,  ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ,ಅಜಯ್ ಶಾಸ್ತ್ರಿ ,ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಳದ ಗೌರವಾಧ್ಯಕ್ಷರಾದ ಎಂ ಕೆ ಪುರಾಣಿಕ್ , ಉಪಾಧ್ಯಕ್ಷರು ನಾಗೇಶ್ ,ಕಾರ್ಯದರ್ಶಿ ಸುಪ್ರಭಾ ,ವಿಪ್ರ ಜಾಗೃತಿ ವೇದಿಕೆಯ ರಮೇಶ್ ,ಮುಳ್ಳೂರು ಸುರೇಶ್ ,ಅರ್ಚಕರ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ ,ರಾಕೇಶ್ ಭಟ್ ,ವಿಕಾಸ್ ಶಾಸ್ತ್ರಿ, ವಿಜಯ್ ಕುಮಾರ್ ,ಪ್ರಶಾಂತ್ ,ಸುಚೀಂದ್ರ ,ಚಕ್ರಪಾಣಿ ,ನಟ ಬಾಲಕೃಷ್ಣ ,ನಾಗಶ್ರೀ ,ವಿಘ್ನೇಶ್ವರ್ ಭಟ್ ,ಸುದರ್ಶನ್ ,ಮಂಜುನಾಥ್  ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News