×
Ad

ಹನೂರು: ಮಳೆಗೆ ನೆಲಕ್ಕುರುಳಿದ ಅಂಗನವಾಡಿ ಕೇಂದ್ರ

Update: 2021-11-19 11:26 IST

ಹನೂರು, ನ.19: ಕರ್ನಾಟಕ ತಮಿಳುನಾಡು ಗಡಿ ಭಾಗದಲ್ಲಿ ಮಳೆಯ ಅಬ್ಬರ ತೀವ್ರಗೊಂಡಿರುವುದರ ಪರಿಣಾಮ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದ  ಅಂಗನವಾಡಿ ಕೇಂದ್ರದ ಕಟ್ಟಡ ನೆಲಕ್ಕುರುಳಿದೆ.

ಜಿಲ್ಲೆಯ ಹನೂರು ತಾಲ್ಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರವು ಮಳೆಯ ನೀರಿನಿಂದ ನೆನೆದು ಒಂದು ಭಾಗದ ಗೋಡೆ ಮೇಲ್ಛಾವಣೆ ಕುಸಿದುಕೊಂಡಿದೆ.

ಅಂಗನವಾಡಿ ಕೇಂದ್ರ ಕುಸಿಯುವ ವೇಳೆ ಯಾರೂ ಇಲ್ಲದೆ ಇದ್ದುರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಪೊನ್ನಾಚಿಯಲ್ಲಿ ಧರೆಗುರುಳಿದ ವಿದ್ಯುತ್ ಕಂಬ

 ತಾಲೂಕಿನಾದ್ಯಂತ ಭಾರೀ ಮಳೆ ಮುಂದುವರಿದಿದ್ದು, ಕಳೆದ ರಾತ್ರಿ ತಾಳಬೆಟ್ಟ ಹಾಗೂ ಪೂನ್ನಾಚ್ಚಿ ರಸ್ತೆ ಮಧ್ಯೆ ಮರಗಳು ಉರುಳಿ ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ಹಲವು ವಿದ್ಯುತ್ ಕಂಬಗಳು ಧರೆಗುರುಳಿವೆ. ಇದರಿಂದ ವಾಹನ ಸಂಚಾರಕ್ಕೆ ತೂಡಕುಂಟಾಗಿತ್ತು. ಬಳಿಕ ಪೂನ್ನಾಚ್ಚಿ ಗ್ರಾಮಸ್ಥರು ಮರಗಳನ್ನು ತೆರವುಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News