×
Ad

'40ಶೇ. ಕಮಿಷನ್' ಆರೋಪ: ಪ್ರಧಾನಿ ಈಗ ತಮ್ಮವರ ಕಮಿಷನ್ ದಂಧೆಯನ್ನ ತಡೆಯುವರೇ; ಕಾಂಗ್ರೆಸ್ ಪ್ರಶ್ನೆ

Update: 2021-11-19 19:28 IST

ಬೆಂಗಳೂರು: ಕಮಿಷನ್ ಪೀಡನೆಗೆ ಗುತ್ತಿಗೆದಾರರು ಪ್ರಧಾನಿಗೆ ದೂರು ನೀಡಿದ್ದಾರೆ ಎಂದು  ರಾಜ್ಯ ಸರಕಾರದ ವಿರುದ್ಧ ಕಾಂಗ್ರೆಸ್  ಆರೋಪಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ''ಬಿಜೆಪಿ ಆಡಳಿತ ಎಂದರೆ 'ಭ್ರಷ್ಟಾಚಾರದ ಕುಣಿತ' ಎಂಬುದಕ್ಕೆ ಮತ್ತೊಂದು ನಿದರ್ಶನ ಎಂಬಂತೆ ಕಮಿಷನ್ ಪೀಡನೆಗೆ ಗುತ್ತಿಗೆದಾರರು ಪ್ರಧಾನಿಗೆ ದೂರಿತ್ತಿದ್ದಾರೆ. ಕಾಂಗ್ರೆಸ್ ಬಗ್ಗೆ ಸುಳ್ಳಿನ ಅಪಪ್ರಚಾರ ನಡೆಸಿದ್ದ ಪ್ರಧಾನಿ ಈಗ ತಮ್ಮವರ 40% ಕಮಿಷನ್ ದಂಧೆಯನ್ನ ತಡೆಯುವರೇ? ತಮ್ಮವರ ಸರ್ಕಾರಕ್ಕೆ '40% ಕಮಿಷನ್ ಸರ್ಕಾರ್' ಎಂಬ ಬಿರುದು ನೀಡುವರೇ?'' ಎಂದು ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News