ಆತಂಕವಾದ ಬೆಳೆಯಬಾರದೆಂಬ ಉದ್ದೇಶದಿಂದ ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಲಾಗಿದೆ: ಸಿಟಿ ರವಿ
ಚಿಕ್ಕಮಗಳೂರು, ನ.19: ಕೃಷಿಕಾಯ್ದೆಗಳ ಸಂಬಂಧ ಆತಂಕವಾದಿಗಳು ತಪ್ಪಾಗಿ ಬಿಂಬಿಸಿದ್ದು, ಚಳುವಳಿಯ ಹಿಂದೆ ದುರುದ್ದೇಶವಿದ್ದ ಹಿನ್ನೆಲೆಯಲ್ಲಿ ಅದಕ್ಕೆ ಅವಕಾಶ ನೀಡಬಾರದು ಎಂಬ ಉದ್ದೇಶದಿಂದ ಕೇಂದ್ರ ಸರಕಾರ ಕೃಷಿಕಾಯ್ದೆಗಳನ್ನು ಹಿಂಪಪಡೆದುಕೊಂಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಮಾಜಾಯಿಸಿ ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಹೆಜ್ಜೆ ಹಿಂದೆ ಸರಿಯುವುದು ಅಪಮಾನ ಎಂದು ಭಾವಿಸುವುದಿಲ್ಲ, ಭಾವಿಸಬೇಕಿಲ್ಲ, ಅರಾಜಕತೆ ಸೃಷ್ಟಿಸುವ ಶಕ್ತಿಗಳು ದುರುದ್ದೇಶದ ಯತ್ನಕ್ಕೆ ಯಶಸ್ಸು ಸಿಗಬಾರದು ಎಂದು ಪ್ರಧಾ£ ಮಂತ್ರಿ ನರೇಂದ್ರ ಮೋದಿಯವರು ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರವನ್ನು ಪ್ರಕಟಸಿದ್ದಾರೆ ಎಂದರು.
ಕೃಷಿ ಮಾರುಕಟ್ಟೆಯನ್ನು ಮುಕ್ತ ಮಾರುಕಟ್ಟೆ ಮಾಡುವಂತೆ ರೈತಸಂಘ, ಕಾಂಗ್ರೆಸ್ ಪಕ್ಷ ಸೇರಿದಂತೆ ಇತರೆ ಸಂಘಟನೆಗಳು ಅಭಿಪ್ರಾಯ ವ್ಯಕ್ತಪಡಿಸಿದ್ದವು. ಈ ವ್ಯವಸ್ಥೆಯನ್ನು ತರಲು ಕೇಂದ್ರ ಸರ್ಕಾರ ಮುಂದಾಗುತ್ತಿದ್ದಂತೆ ಈ ಯಶಸ್ಸು ಮೋದಿಯವರಿಗೆ, ಬಿಜೆಪಿ ಸರ್ಕಾರಕ್ಕೆ ಸಲುತ್ತದೆ ಎಂದು ವಿರೋಧ ವ್ಯಕ್ತಪಡಿಸಿದರು ಎಂದರು.
ಕೃಷಿ ಕಾಯ್ದೆ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೆಗೆದುಕೊಂಡ ನಿರ್ಧಾರ ಒಳ್ಳೆಯದಿತ್ತು ಎಂದು ನೊಂದು ನುಡಿಯುವ ಕಾಲ ಬರಲಿದೆ ಎಂದ ಅವರು ಕಾಯ್ದೆಗಳು ರೈತರಿಗೆ ಪೂರಕವಾಗಿದ್ದವು. ಆದರೆ ಪಂಜಾಬಿನ ಕೆಲವು ಆತಂಕವಾದಿಗಳು ಜನರಲ್ಲಿ ತಪ್ಪು ಬಿಂಬಿಸಿದರು. ಕಾಯ್ದೆಯ ಬಗ್ಗೆ ದೇಶದ ಉದ್ದಗಲಕ್ಕೂ ಮನವರಿಕೆ ಮಾಡಿದೆವು. ಆದರೆ, ಪಂಜಾಬ್, ಹರಿಯಾಣದಲ್ಲಿ ಸಾಧ್ಯವಾಗಲಿಲ್ಲ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಹೆಜ್ಜೆ ಹಿಂದೆ ಸರಿಯುವುದು ಅಪಮಾನವೆಂದು ಭಾವಿ ಸುವುದಿಲ್ಲ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸರ್ವಾಧಿಕಾರಿಯಲ್ಲ, ಪ್ರಜಾಪ್ರಭು ತ್ವವಾದಿ ಹಾಗಾಗೀ ಕಾಯ್ದೆಯನ್ನು ಹಿಂಪಡೆದಿದ್ದಾರೆ ಎಂದರು.
ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರ ರೈತರ ಖಾತೆಗೆ 6ಸಾವಿರ ರೂ. ಹಣ ಪಾವತಿ ಮಾಡಿದೆ. ಯೂರಿಯಾ ರಸಗೊಬ್ಬರ ಸಮರ್ಪಕವಾಗಿ ಪೂರೈಕೆ ಮಾಡಿದೆ. ಸ್ವಾಮಿ ನಾಥನ್ ವರದಿಯನ್ನು ಶೇ.90ರಷ್ಟು ಅನುಷ್ಠಾನಗೊಳಿಸಿದೆ ಇದು ರೈತವಿರೋಧಿಯಾಗು ತ್ತದೆಯೆ ಎಂದು ಸಿದ್ದರಾಮಯ್ಯ ಅವರ ಟ್ವಿಟ್‍ಗೆ ಪ್ರತಿಕ್ರಿಯಿಸಿದರು.