ಜೆಡಿಎಸ್ ನಲ್ಲಿ ಶಂಖ ಊದುವುದಕ್ಕೂ ಯಾರೂ ಇಲ್ಲದಂತಾಗಿದೆ: ಕುಮಾರಸ್ವಾಮಿಗೆ ಸಚಿವ ಈಶ್ವರಪ್ಪ ತಿರುಗೇಟು
Update: 2021-11-20 13:43 IST
ಮೈಸೂರು: 'ಜನ ಸಂಕಷ್ಟದಲ್ಲಿರುವಾಗ ಶಂಖ ಊದಿಕೊಂಡು ಹೋದರೆ ಸ್ವರಾಜ್ಯ ಸಿಗುತ್ತಾ?' ಎಂದು ಬಿಜೆಪಿಯ ಜನಸ್ವರಾಜ ಸಮಾವೇಶವನ್ನು ಟೀಕಿಸಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಸಚಿವ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ,' ಜೆಡಿಎಸ್ ನಲ್ಲಿ ಶಂಖ ಊದುವುದಕ್ಕೂ ಯಾರೂ ಇಲ್ಲದಂತಾಗಿದೆ. ನಾವು ಗ್ರಾಮೀಣಾಭಿವೃದ್ಧಿಯ ಶಂಖ ಊದುತ್ತಿದ್ದೇವೆ. ಅಭಿವೃದ್ಧಿಯ ಶಂಖ ಊದುತ್ತಿದ್ದೇವೆ, ನಮ್ಮ ಬಳಿ ಜನ ಇದ್ದಾರೆ ಅವರ ಬಳಿ ಜನರೇ ಇಲ್ಲ, ವಿಧಾನಪರಿಷತ್ ಚುನಾವಣೆಯಲ್ಲಿ ಎಷ್ಟು ಸ್ಥಾನ ಗೆಲ್ಲುತ್ತಾರೆ ನೋಡೋಣ' ಎಂದು ಟೀಕಿಸಿದರು.