×
Ad

'ಬಿಜೆಪಿಗೆ ಹೆದರಿ ಪಟೇಲರಿಗೆ ಗೌರವ ತೋರಿದ ಕಾಂಗ್ರೆಸ್': ಶಾಸಕ ರೇಣುಕಾಚಾರ್ಯ

Update: 2021-11-23 18:47 IST

ಬೆಂಗಳೂರು: ಇತ್ತೀಚೆಗೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಇಂದಿರಾಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ವಲ್ಲಭಬಾಯ್ ಪಟೇಲ್ ಪೋಟೋ ಇಡುವ ವಿಚಾರಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಮಧ್ಯೆ ನಡೆದ ಸಂಭಾಷಣೆಯ ವೀಡಿಯೋ ತುಣುಕು ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಕುರಿತು ಶಾಸಕ ಎಂ.ಪಿ ರೇಣುಕಾಚಾರ್ಯ ಪ್ರತಿಕ್ರಿಯಿಸಿದ್ದಾರೆ. 

ಜಾಲತಾಣವೊಂದರ ವೀಡಿಯೋ ತುಣಕನ್ನು ತನ್ನ ಟ್ವಿಟರ್ ನಲ್ಲಿ ಹಂಚಿಕೊಂಡಿರುವ ರೇಣುಕಾಚಾರ್ಯ , 'ಬಿಜೆಪಿಗೆ ಹೆದರಿ ಪಟೇಲರಿಗೆ ಗೌರವ ತೋರಿದ ಕಾಂಗ್ರೆಸ್! ನವರ ಕರ್ಮಕಥೆ' ಎಂದು ಟೀಕಿಸಿದ್ದಾರೆ.

ಇತ್ತೀಚೆಗೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಇಂದಿರಾಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಇಂದಿರಾಗಾಂಧಿ ಫೋಟೊ ಜೊತೆ ವಲ್ಲಭಬಾಯ್ ಪಟೇಲ್ ಅವರ ಜನ್ಮದಿನ ಕಾರಣಕ್ಕೆ ಪಟೇಲ್ ಅವರ ಪೋಟೋ ಇಡಲು ಸಿದ್ದರಾಮಯ್ಯ ಸೂಚನೆ ನೀಡಿದ್ದು, ಈ ವೇಳೆ ಡಿ.ಕೆಶಿವಕುಮಾರ್ ನಾವು ಪುಣ್ಯಸ್ಮರಣೆ ಮಾತ್ರ ಮಾಡುತ್ತೇವೆ ಆದ್ರೆ ಜನ್ಮಾಚರಣೆ ಮಾಡಲ್ಲ ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಬಿಜೆಪಿಯರು ಅದನ್ನೇ ಅವರ ಪ್ರಯೋಜನಕ್ಕೆ ತೆಗೆದುಕೊಳ್ಳುತ್ತಾರೆ. ದೊಡ್ಡದಾಗಿ ಮಾಡ್ತಾರೆ ಎಂದು ಹೇಳಿರುವುದು ಬಳಿಕ ವಲ್ಲಭಬಾಯ್ ಪಟೇಲ್ ಪೋಟೋ ಇಡುವುದು ವೀಡಿಯೋದಲ್ಲಿ ಕಾಣಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News