ಉತ್ತರ ಪ್ರದೇಶ: ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಶೇ.35 ವಿಧಾನಸಭೆ ಸದಸ್ಯರು; ಎಡಿಆರ್ ವರದಿ

Update: 2021-11-24 06:53 GMT
ಸಾಂದರ್ಭಿಕ ಚಿತ್ರ (PTI)

ಲಕ್ನೊ: ಉತ್ತರ ಪ್ರದೇಶ ವಿಧಾನಸಭಾ ಸದಸ್ಯರಲ್ಲಿ 35 ಶೇ. ರಷ್ಟು ಕ್ರಿಮಿನಲ್ ಮೊಕದ್ದಮೆಗಳು ಬಾಕಿ ಉಳಿದಿವೆ ಎಂದು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವಿಶ್ಲೇಷಣೆಯು ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ಮುಂಚಿತವಾಗಿ ಪತ್ತೆ ಹಚ್ಚಿದೆ. ಅವರಲ್ಲಿ ಶೇಕಡ 27ರಷ್ಟು ಮಂದಿ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಎಡಿಆರ್ 369 ಶಾಸಕರ ಘೋಷಣೆಗಳನ್ನು ವಿಶ್ಲೇಷಿಸಿದೆ ಹಾಗೂ  ಅವರಲ್ಲಿ ಏಳು ಮಂದಿಯ ವಿರುದ್ಧ ಕೊಲೆ ಪ್ರಕರಣಗಳು 36 ಕೊಲೆ ಯತ್ನಗಳು ಹಾಗೂ  ಮಹಿಳೆಯರ ವಿರುದ್ಧದ ಎರಡು ಅಪರಾಧಗಳು ಬಾಕಿ ಉಳಿದಿವೆ ಎಂದು ಕಂಡುಹಿಡಿದಿದೆ.

“ಆಡಳಿತರೂಢ  ಬಿಜೆಪಿಯ 304 ಶಾಸಕರಲ್ಲಿ 106 (35ಶೇ.), ಎಸ್‌ಪಿ (ಸಮಾಜವಾದಿ ಪಕ್ಷ) ದ 49 ಶಾಸಕರಲ್ಲಿ 18 (37ಶೇ.), ಬಿಎಸ್‌ಪಿಯ (ಬಹುಜನ ಸಮಾಜ ಪಕ್ಷ) 16 ಶಾಸಕರಲ್ಲಿ ಐವರು ಹಾಗೂ ಐಎನ್‌ಸಿ (ಕಾಂಗ್ರೆಸ್) ನ 7 ಶಾಸಕರಲ್ಲಿ 1 (14 ಶೇ.) ತಮ್ಮ ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿದ್ದಾರೆ” ಎಂದು ಎಡಿಆರ್‌ನ ವರದಿಯು ವಿಶ್ಲೇಷಣೆಯ ಆಧಾರದ ಮೇಲೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News