ಕೊಳ್ಳೇಗಾಲ: ಗೃಹಿಣಿ ನಾಪತ್ತೆ; ದೂರು
Update: 2021-11-24 18:19 IST
ಕೊಳ್ಳೇಗಾಲ. ನ.24.ಆನಂದ ಜ್ಯೋತಿ ಕಾಲೋನಿಯ ಗೃಹಿಣಿಯೋರ್ವಳು ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಟ್ಟಣದ ಆನಂದ ಜ್ಯೋತಿ ಕಾಲೋನಿಯ ನಿವಾಸಿ ಸಿದ್ದರಾಜು ಎಂಬುವರ ಮಗಳಾದ 26 ವರ್ಷ ವಯಸ್ಸಿನ ಸುಚಿತ್ರ ನಾಪತ್ತೆಯಾಗಿರುವ ಗೃಹಿಣಿ.
ಈಕೆಯನ್ನು ಟಿ.ನರಸೀಪುರ ತಾಲೂಕಿನ ಬಣವೆ ಗ್ರಾಮದ ಲೋಕೇಶ್ ಎಂಬಾತನನಿಗೆ ವಿವಾಹ ಮಾಡಿಕೊಡಲಾಗಿತ್ತು. ಈ ನಡುವೆ ಕೌಟುಂಬಿಕ ಕಲಹ ಏರ್ಪಟ್ಟು ಸುಚಿತ್ರ ತನ್ನ ತವರು ಮನೆಯಾದ ಇಲ್ಲಿನ ಆನಂದಜ್ಯೋತಿ ಕಾಲೋನಿಗೆ ಬಂದು ವಾಸವಿದ್ದಳು. ಆದರೆ, ಕಳೆದ ಜು.7 ರಂದು ಮನೆ ಬಿಟ್ಟು ಹೋದವಳು ಮನೆಗೆ ಹಿಂತಿರುಗದ ಕಾರಣ ತಂದೆ ಸಿದ್ದರಾಜು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.