ಕಲಬುರ್ಗಿ: ಅಧಿಕಾರಿಯ ಮನೆಯ ಪೈಪಿನಿಂದ ಹೊರ ಬಂತು ಕಂತೆ ಕಂತೆ ನೋಟುಗಳು !
Update: 2021-11-24 20:56 IST
ಕಲಬುರ್ಗಿ: ಕಲಬುರ್ಗಿಯ ಗುಬ್ಬಿ ಕಾಲನಿಯಲ್ಲಿರುವ ಲೋಕೋಪಯೋಗಿ ಇಲಾಖೆ ಕಿರಿಯ ಇಂಜಿನಿಯರ್ ಎಸ್.ಎಂ.ಬಿರಾದರ್ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ನಡೆಸಿದಾಗ ಮನೆಯ ಹೊರಭಾಗದ ಪೈಪ್‍ನಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದೆ.
ಬುಧವಾರ ಬೆಳಗಿನ ಜಾವ ಎಸಿಬಿ ಅಧಿಕಾರಿಗಳು ಮನೆಯ ಮೇಲೆ ದಾಳಿ ನಡೆಸಿದಾಗ ಅನುಮಾನಗೊಂಡ ಶಾಂತಗೌಡ 10 ನಿಮಿಷ ಬಾಗಿಲು ತೆರೆಯದೆ ಸತಾಯಿಸಿದ್ದರು. ಈ ವೇಳೆ ಪೈಪ್‍ನಲ್ಲಿ ಹಣ, ಚಿನ್ನಾಭರಣವನ್ನು ಬಿಸಾಕಿದ್ದಾರೆ ಎಂದು ತಿಳಿದುಬಂದಿದೆ.
ಮನೆಯನ್ನು ತಪಾಸಣೆ ನಡೆಸಿದ ಅಧಿಕಾರಿಗಳಿಗೆ ಪೈಪ್‍ನಲ್ಲಿ ಹಣ ಇರುವುದು ಗೊತ್ತಾಗಿ, ಕಾರ್ಮಿಕರೊಬ್ಬರನ್ನು ಕರೆತಂದು ಹಣವನ್ನು ಹೊರತೆಗೆದು ಲೆಕ್ಕಹಾಕಿದರು.