ಬೆಂಗಳೂರು: ತಂದೆಯ ಹತ್ಯೆ ಪ್ರಕರಣ; ಪುತ್ರಿ ಸೇರಿ ಹಲವರು ವಶಕ್ಕೆ
Update: 2021-11-24 22:09 IST
ಬೆಂಗಳೂರು, ನ.24: ಲೈಂಗಿಕ ಕಿರುಕುಳ ನೀಡುತ್ತಿದ್ದ ತಂದೆಯನ್ನು ಪಿಯುಸಿ ಓದುತ್ತಿದ್ದ ಪುತ್ರಿ ತನ್ನ ಸ್ನೇಹಿತರಿಂದಲೇ ಕೊಲೆ ಮಾಡಿಸಿದ್ದ ಪ್ರಕರಣ ಸಂಬಂಧ ನಾಲ್ವರನ್ನು ಯಲಹಂಕದ ಉಪನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಜಿಕೆವಿಕೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ದೀಪಕ್ ಕುಮಾರ್ ಸಿಂಗ್(46) ಅವರ ಕೊಲೆ ಮಾಡಿಸಿದ್ದ ಆರೋಪ ಪುತ್ರಿ ಮೇಲಿದ್ದು, ಈ ಸಂಬಂಧ ಆಕೆಯ ನಾಲ್ವರು ಅಪ್ರಾಪ್ತ ಸ್ನೇಹಿತರನ್ನು ವಶಕ್ಕೆ ಪಡೆದುಕೊಂಡು ತನಿಖೆಯನ್ನು ಕೈಗೊಳ್ಳಲಾಗಿದೆ.
ಕೃತ್ಯ ನಡೆಸಿದ ಎಲ್ಲರೂ ಯಲಹಂಕ ಸರಕಾರಿ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳಾಗಿದ್ದು ಎಲ್ಲರೂ ಅಪ್ರಾಪ್ತರಾಗಿದ್ದು ಮತ್ತೊಬ್ಬನ ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.