ಎಸಿಬಿ ದಾಳಿ: ಮತ್ತೆ 50 ಲಕ್ಷ ರೂ. ಅಕ್ರಮ ಆಸ್ತಿ ಪತ್ತೆ

Update: 2021-11-26 16:48 GMT

ಬೆಂಗಳೂರು, ನ.26: ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಆರೋಪ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ತನಿಖೆಯನ್ನು ಮುಂದುವರಿಸಿದ್ದು, ಕಲಬುರಗಿಯ ಜೇವರ್ಗಿ ಲೋಕೋಪಯೋಗಿ ಇಲಾಖೆ ಕಿರಿಯ ಇಂಜಿನಿಯರ್ ಎಸ್.ಎಂ.ಬಿರಾದರ್ ಅವರ ಬಳಿ ಈವರೆಗೆ ಸಿಕ್ಕಿದ್ದ ಅಕ್ರಮ ಆಸ್ತಿಗೆ ಹೆಚ್ಚುವರಿಯಾಗಿ ಶುಕ್ರವಾರ ಮತ್ತೆ ಸುಮಾರು 50 ಲಕ್ಷ ರೂ.ವಿವಿಧ ಬ್ಯಾಂಕ್ ಖಾತೆಗಳಲ್ಲಿ ಪತ್ತೆಯಾಗಿದೆ.

ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಮೂರು ದಿನಗಳಿಂದ ಶೋಧನಾ ಕಾರ್ಯ ನಡೆಸುತ್ತಿದ್ದು, ಈವರೆಗೆ 15 ಸರಕಾರಿ ಅಧಿಕಾರಿಗಳ ಬಳಿ 72 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಎಸ್.ಎಂ.ಬಿರಾದರ್ ಅವರ ಬಳಿ ಈವರೆಗೆ ಸಿಕ್ಕಿದ್ದ ಅಕ್ರಮ ಆಸ್ತಿಗೆ ಹೆಚ್ಚುವರಿಯಾಗಿ ಶುಕ್ರವಾರ 50 ಲಕ್ಷ ರೂ.ವಿವಿಧ ಬ್ಯಾಂಕ್ ಖಾತೆಗಳಲ್ಲಿ ಪತ್ತೆಯಾಗಿದೆ.

ಅರ್ಜಿ ವಿಚಾರಣೆ ಮುಂದೂಡಿಕೆ: ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಗದಗದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಅವರಿಗೆ ಡಿ.7ರವರೆಗೆ ಗುರುವಾರ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ರುದ್ರೇಶಪ್ಪ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಶಿವಮೊಗ್ಗದ 1ನೆ ಸೆಷನ್ಸ್ ಕೋರ್ಟ್ ನ.30ಕ್ಕೆ ಮುಂದೂಡಿ ಆದೇಶಿಸಿದೆ.  


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News