ದೇಶದ ಸಂಸ್ಕೃತಿ ಜಾನಪದದಲ್ಲಿ ಅಡಗಿದೆ: ಗೊ.ರು. ಚನ್ನಬಸಪ್ಪ

Update: 2021-11-27 17:12 GMT

ಬೆಂಗಳೂರು, ನ.27: ದೇಶದ ನಿಜವಾದ ಸಂಸ್ಕೃತಿಯು ಜಾನಪದದಲ್ಲಿ ಮಾತ್ರ ಅಡಗಿದೆ. ಅದನ್ನು ಪ್ರಚುರಪಡಿಸುವುದು ಅಗತ್ಯ. ಸರಕಾರವು ಈ ಕೆಲಸವನ್ನು ಮಾಡಬೇಕು ಎಂದು ಜಾನಪದ ಚಿಂತಕ ಗೊ.ರು. ಚನ್ನಬಸಪ್ಪ ತಿಳಿಸಿದ್ದಾರೆ.

ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ, ನಾಡೋಜ ಎಚ್.ಎಲ್. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ದೇಶ ಮತ್ತು ನಾಡಿನ ಸಂಸ್ಕøತಿಯನ್ನು ಅರಿಯಬೇಕಾದರೆ, ಇಲ್ಲಿನ ಜನಪದವನ್ನು ಅರಿಯಬೇಕು. ಈ ನಿಟ್ಟಿನಲ್ಲಿಯೇ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವನ್ನು ಸರಕಾರವು ಸ್ಥಾಪಿಸಿದೆ. ಆದರೆ ಇತ್ತೀಚಿನ ಸರಕಾರಗಳು ವಿವಿಯನ್ನು ಕಡೆಗಣಿಸುತ್ತಿರುವುದು ದುಃಖದ ವಿಷಯವಾಗಿದೆ ಎಂದರು.

ಪ್ರಶಸ್ತಿ ಪುರಸ್ಕøತ ಸೂಫಿ ಕಲಾವಿದ ಮಹಮ್ಮದ್ ಮಾತನಾಡಿ, ನನಗೆ ಕನ್ನಡ ಬಾಷೆ ತಿಳಿಯದಿದ್ದರೂ ಕನ್ನಡಿಗರ ಭಾವ ಅರಿವಾಗುತ್ತಿದೆ. ಜಾನಪದ ಸಂಸ್ಕøತಿಯಿಂದ ಕರ್ನಾಟಕದ ಸ್ಥಾನಮಾನ ಉತ್ತುಂಗದಲ್ಲಿದೆ. ಇಲ್ಲಿನ ಜನಪದ ಸಂಸ್ಕøತಿ ಎಲ್ಲವನ್ನು ಮರೆಯುವಂತೆ ಮಾಡುತ್ತದೆ ಎಂದರು.

ನಿರ್ಮಲಾನಂದ ಸ್ವಾಮಿಜಿಗಳು ಮಾತನಾಡಿ, ಆಧುನಿಕತೆಯಿಂದ ಜಾನಪದ ಸಂಸ್ಕøತಿಯು ನಾಶವಾಗುತ್ತಿದೆ. ಹಿಂದೆ ರಾಜ ಮಹಾರಾಜರ ಕಾರ್ಯಕ್ರಮದಲ್ಲಿ ಜಾನಪದ ಸಂಸ್ಕøತಿಯೇ ಪ್ರಧಾನವಾಗಿರುತ್ತಿತ್ತು. ಆದುದರಿಂದ ಶ್ರೀಸಾಮಾನ್ಯರ ಜಾನಪದ ಸಂಸ್ಕøತಿಗೆ ತುಂಬಾ ಬೆಲೆ ಇತ್ತು. ಆದರೆ ಇಂದು ಅದಕ್ಕೆ ವಿರುದ್ಧವಾಗಿದೆ. ಆಧುನಿಕತೆಯ ಅಳವಡಿಸಿಕೊಳ್ಳುವಲ್ಲಿ ಜಾನಪದವನ್ನು ಮರೆಯುತ್ತಿದ್ದೇವೆ ಎಂದ ಅವರು, ಜಾನಪದ ಸಂಗೀತಕ್ಕೂ ಸೂಫಿ ಸಂಗೀತಕ್ಕೂ ಅಷ್ಟೇನು ವ್ಯತ್ಯಾಸವಿಲ್ಲ ಎಂಬಂತೆ ಪರಸ್ಪರ ಹೋಲುತ್ತವೆ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಪರಿಷತ್ತಿನ ಅಧ್ಯಕ್ಷ ತಿಮ್ಮೇಗೌಡ, ಟ್ರಸ್ಟಿ ಆಧಿನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News