ಮೈಸೂರು: ಖಾಲಿ ಪತ್ರಕ್ಕೆ ಮೃತ ವೃದ್ಧೆಯ ಸಹಿ ಮಾಡಿಸಿಕೊಂಡ ಸಂಬಂಧಿಕರು!

Update: 2021-11-28 10:39 GMT

ಮೈಸೂರು: ಖಾಲಿ ಪತ್ರಕ್ಕೆ ಮೃತ ಪಟ್ಟ ವೃದ್ಧೆಯೋರ್ವರ ಹೆಬ್ಬೆಟ್ಟಿನ ಮುದ್ರೆ ಒತ್ತಿಸಿಕೊಂಡ  ಸಹಿಯನ್ನು ಸಂಬಂಧಿಕರು ಮಾಡಿಸಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.

ನಗರದ ಶ್ರೀರಾಂಪುರ ದಲ್ಲಿ ಈ ಘಟನೆ ನಡೆದಿದ್ದು, ಮೃತ ವೃದ್ಧೆಯ ಕೈ ಹೆಬ್ಬೆಟ್ಟಿನಿಂದ ಸಂಭದಿಕರು ಸಹಿಮಾಡಿಸಿಕೊಳ್ಳುತ್ತಿರುವುದನ್ನು ಕಂಡ ಮಹಿಳೆಯೊಬ್ಬರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಆದರೂ ಸಂಬಂಧಿಕರು ಹೆಬ್ಬೆಟ್ಟಿನ ಮುದ್ರೆಯನ್ನು ಒತ್ತಿಸಿಕೊಂಡಿದ್ದಾರೆ. ಈ ವೇಳೆ ಕಾಗದ ಪತ್ರಗಳನ್ನು ಕಿತ್ತುಕೊಳ್ಳಲು ಮಹಿಳೆ ಯತ್ನಿಸಿದ್ದರಾದರೂ, ಸಂಬಂಧಿಕರು ತಕ್ಷಣ ಕಾಗದ ಪತ್ರಗಳನ್ನು ಪಕ್ಕದಲ್ಲೇ ಇದ್ದ ತಮ್ಮ‌ ಮನೆಗೆ ರವಾನಿಸಿದ್ದಾರೆ.

ಈ ವೇಳೆ ಮಹಿಳೆಯೊಬ್ಬರು ವೀಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.

ಮಹಿಳೆ ವೀಡಿಯೋ ಮಾಡಿಕೊಂಡಿದ್ದರಿಂದ ಸಂಬಂಧಿಕರು ಆಕೆಯ ಜೊತೆ ಜಗಳ ಸಹ ಆಡಿದ್ದಾರೆ ಎನ್ನಲಾಗಿದೆ.

ಕೂಡಲೇ ಇವರ ಮೇಲೆ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News