ಕರಾವಳಿ ಭಾಗದಲ್ಲಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ

Update: 2021-11-29 18:20 GMT

ಬೆಂಗಳೂರು, ನ.29: ಉತ್ತರ ಕರ್ನಾಟಕ ಭಾಗದಲ್ಲಿ ಇನ್ನೆರಡು ದಿನಗಳ ಕಾಲ ಮೋಡ ಕವಿದ ವಾತಾವರಣ ಇರಲಿದೆ ಹಾಗೂ ಕರಾವಳಿ ಭಾಗದಲ್ಲಿ ಮಳೆ ಆಗುವ ಸಂಭವವಿದೆ ಎಂದು ಧಾರವಾಡ ಕೃಷಿ ವಿವಿ ಹವಾಮಾನ ಕೇಂದ್ರ ಮುಖ್ಯಸ್ಥ ಡಾ.ಆರ್.ಎಚ್.ಪಾಟೀಲ್ ತಿಳಿಸಿದ್ದಾರೆ.

ಕರಾವಳಿ ಭಾಗದಲ್ಲಿ ಮಳೆ ಸುರಿದ ಬಳಿಕ ಪುನಃ ಬಿಸಿಲು ಬರಲಿದೆ ಎಂದು ತಿಳಿಸಿದ್ದಾರೆ. 

ಡಿ.1ರ ಬಳಿಕ ಮತ್ತೊಂದು ವಾಯುಭಾರ ಕುಸಿತ ಆಗಲಿದ್ದು, ಅಂಡಮಾನ್, ನಿಕೋಬಾರ್ ಭಾಗದಲ್ಲಿ ಇದು ಸಂಭವಿಸಲಿದೆ. ಆದರೆ, ಕರ್ನಾಟಕ ಭಾಗಕ್ಕೆ ಇದು ಪರಿಣಾಮ ಬೀರುವುದಿಲ್ಲ ಎಂದು ಮಾಹಿತಿ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News