ಬಾಗೇಪಲ್ಲಿ: ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ಖಂಡಿಸಿ ಸಿಪಿಎಂ ಪ್ರತಿಭಟನೆ

Update: 2021-12-01 13:40 GMT

ಬಾಗೇಪಲ್ಲಿ: ಅಲ್ಪಸಂಖ್ಯಾತರ ಮೇಲೆ ನಡೆಸುತ್ತಿರುವ ದಾಳಿಗಳನ್ನು ವಿರೋಧಿಸಿ ಸಿಪಿಎಂ ಪಕ್ಷದಿಂದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಸಿಪಿಎಂ ಪಕ್ಷದ ತಾಲೂಕು ಕಾರ್ಯದರ್ಶಿ ಮಹಮದ್ ಅಕ್ರಂ ಮಾತನಾಡಿ ಸಂಘ ಪರಿವಾರಕ್ಕೆ ಸಂಯೋಜಿತವಾಗಿರುವ ಸಂಸ್ಥೆಗಳಿಂದ ಅಲ್ಪ ಸಂಖ್ಯಾತರ, ಕ್ರಿಶ್ಚಿಯನ್ನರ ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ಹೆಚ್ಚುತ್ತಿರುವ ದಾಳಿಗಳ ಬಗ್ಗೆ ಸಿಪಿಎಂ ಪಕ್ಷ ಕಳವಳ ವ್ಯಕ್ತಪಡಿಸುತ್ತದೆ, ಇದು ಭಾರತ ಸಂವಿಧಾನದ ಮೇಲೆ ನಡೆಸುತ್ತಿರುವ ದಾಳಿಗಲಾಗಿವೆ ಡಿಸೆಂಬರ್ 1ನ್ನು ಧಾರ್ಮಿಕ , ಅಲ್ಪ ಸಂಖ್ಯಾತರು ಮತ್ತು ಅವರ  ಸಂವಿಧಾನದ ಹಕ್ಕುಗಳ  ಮೇಲಿನ ದಾಳಿಗಳ ವಿರುದ್ದ ಪ್ರತಿಭಟನೆಯ ದಿನವಾಗಿ ಆಚರಿಸಲಾಗುತ್ತಿದೆ, ಸಾಮಾಜಿಕ ಮಾದ್ಯಮ  ವೇದಿಕೆ ಫೇಸ್‍ಬುಕ್‍ನ ಆಂತರಿಕ ದಾಖಲೆಗಳಲ್ಲಿ ಇತ್ತೀಚಿಗೆ ಬಯಲಿಗೆ ಬಂದಿರುವ ಸಂಗತಿಗಳೂ ಕೂಡ ಬಿಜೆಪಿ ನಾಯಕರು ಹೇಗೆ ಅತ್ಯಂತ ಕೋಮುವಾದಿ ಸಂದೇಶಗಳನ್ನು ಉತ್ತೇಜಿಸಿದ್ದಾರೆ, ಅನೇಕ ಸಂದರ್ಭಗಳಲ್ಲಿ ಹಿಂಸಾಚಾರವನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಿದರು. 

ಇಂತಹ ಕೋಮುವಾದಿ ಕೃತ್ಯಗಳನ್ನು ಎಸಗಿದವರು ಕಾನೂನುನಿಂದ ವಿನಾಯಿತಿ ಪಡೆಯುತ್ತಾರೆ, ಮಾತ್ರವಲ್ಲ ಸಂತ್ರಸ್ತರನ್ನು ರಕ್ಷಿಸುವ ಬದಲು ಬಿಜೆಪಿ ಆಳ್ವಿಕೆಯ ಅನೇಕ ರಾಜ್ಯಗಳಲ್ಲಿನ ಆಡಳಿತವು ಸಂತ್ರಸ್ತರನ್ನು ಮತ್ತು ಅವರನ್ನು ಬೆಂಬಿಸುವವರನ್ನು ಸುಳ್ಳು ಪ್ರಕರಣಗಳ ಮೂಲಕ ಶಿಕ್ಷಿಸುತ್ತಿದೆ, ಮತ್ತು ಕರಾಳ ಕಾನೂನುಗಳ ಅಂಶಗಳ ಅಡಿಯಲ್ಲಿ  ಬಂದಿಸುತ್ತಿವೆ ಎಂದರು.

ಕೆಪಿಆರ್ ಎಸ್ ರಾಜ್ಯ ಸಮಿತಿ ಸದಸ್ಯ ಜೆಸಿಬಿ ಮಂಜುನಾಥರೆಡ್ಡಿ ಮಾತನಾಡಿ ಮಾನವ ಹಕ್ಕುಗಳ ಗುಂಪುಗಳ ಇತ್ತೀಚಿನ ವರದಿಗಳು 2021 ರಲ್ಲಿ ಮೊದಲು  9 ತಿಂಗಳೊಳಗೆ ಕ್ರಿಶ್ಚಿಯನ್ ಸಮುದಾಯಗಳು  ಅವರ ಧಾರ್ಮಿಕ ಆರಾಧನ ಸ್ಥಳಗಳ ಮೇಲೆ 300 ದಾಳಿಗಳನ್ನು  ದಾಖಲಿಸಿವೆ, ಇವುಗಳಿಗೆ ಗುರಿಯಾದವರು ಹೆಚ್ಚಿನವರು ಆದಿವಾಸಿ ಮತ್ತು ದಲಿತ ಸಮುದಾಯಗಳಿಗೆ ಸೇರಿದವರು, ಪ್ರಾರ್ಥನಾ  ಸಭೆಗಳನ್ನು ನಿಯಮಿತವಾಗಿ ತಡೆಯಲಾಗುತ್ತಿದೆ ಮತ್ತು ಮತಾಂತರವನ್ನು ತಡೆಯುವ ಹೆಸರಿನಲ್ಲಿ ಭಾಗವಹಿಸುವವರನ್ನು ಥಳಿಸಲಾಗುತ್ತಿದೆ ಎಂದು ಆರೋಪಿಸಿದರು.

ಮುಸ್ಲಿಂ ಅಲ್ಪ ಸಂಖ್ಯಾತ ಸಮುದಾಯದವರನ್ನು ಗುರಿಯಾಗಿಸಿಕೊಂಡು ದೊಂಬಿ ಹತ್ಯೆ ಪೋಲೀಸ್ ಹತ್ಯೆಗಳು, ಸುಳ್ಳು ಬಂಧನಗಳು ಮತ್ತು ಅವರ ವಿರುದ್ದ ಗೋರಕ್ಷಣೆ, ಲವ್ ಜಿಹಾದ್ ಹೆಸರಿನಲ್ಲಿ ದೊಂಬಿ ಹಿಂಸಾಚಾರಗಳನ್ನು ನಡೆಸುತ್ತಿದ್ದರೂ ರಕ್ಷಣೆ ಮಾಡಬೇಕಾದ ಸರ್ಕಾರಗಳು ಭಕ್ಷಕರಾಗುತ್ತಿದ್ದಾರೆ ಈ ಹಿನ್ನಲೆಯಲ್ಲಿ ಅಲ್ಪ ಸಂಖ್ಯಾತರ, ದಲಿತ ಕ್ರಿಶ್ಚಿಯನ್ ಮೇಲೆ ನಡೆಯುತ್ತಿರುವ ದಾಳಿಗಳನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮುಖಂಡರು ಗ್ರೇಡ್-2 ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಜಿಪಂ ಮಾಜಿ ಉಪಾಧ್ಯಕ್ಷೆ ಬಿ.ಸಾವಿತ್ರಮ್ಮ, ಮುಖಂಡರಾದ ಶ್ರೀರಾಮನಾಯ್ಕ್, ಬೂರಗಮಡುಗು ನರಸಿಂಹಪ್ಪ, ಅಶ್ವತ್ತಪ್ಪ, ಗಂಗರಾಜು, ಬಿ.ವಿ.ನಾಗರಾಜು ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News