ಬೇಲೂರು ಚರ್ಚ್ ದಾಳಿ: ಮತಾಂತರದ ಪ್ರಯತ್ನ ನಡೆದಿರಲಿಲ್ಲ; ಚರ್ಚ್ ಪ್ರಮುಖರ ಸ್ಪಷ್ಟನೆ

Update: 2021-12-01 15:24 GMT
ಫೈಲ್ ಚಿತ್ರ

ಬೇಲೂರು, ಡಿ.1: ಪಟ್ಟಣದ ಬಿಕ್ಕೋಡು ರಸ್ತೆಯಲ್ಲಿರುವ ಚರ್ಚ್ ಒಂದರಲ್ಲಿ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಸಂಘಪರಿವಾರದ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆ ಕೂಗಿ ಪ್ರಾರ್ಥನೆಗೆ ಅಡ್ಡಿಯುಂಟು ಮಾಡಿರುವ ಘಟನೆ ರವಿವಾರ ನಡೆದಿದ್ದು, ಈ ಪ್ರದೇಶದಲ್ಲಿ ಮತಾಂತರ ನಡೆಯುತ್ತಿದೆ, ಇದನ್ನು ತಡೆಯಲು ಮುಂದಾದ ವೇಳೆ ನಮ್ಮ ಮೇಲೆ ದಾಳಿ ನಡೆಸಲಾಯಿತು ಎಂದು ಸಂಘಪರಿವಾರದ ಕಾರ್ಯಕರ್ತರು ಹೇಳಿಕೆ ನೀಡಿರುವುದು ಮಾಧ್ಯಮಗಳಲ್ಲಿ ವರಿದಿಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಿಕೆಯೊಂದಿಗೆ ಚರ್ಚ್ ನ ಪ್ರಮುಖರು ಸ್ಪಷ್ಟನೆ ನೀಡಿದ್ದಾರೆ.

ಪತ್ರಿಕೆಯೊಂದಿಗೆ ಮಾತನಾಡಿದ ಚರ್ಚ್ ಪ್ರಮುಖರು, ಇಲ್ಲಿ ಯಾವುದೇ ರೀತಿಯ ಮತಾಂತರ ನಡೆಯುತ್ತಿರಲಿಲ್ಲ ಹಾಗೂ ನಾವು ಹಲ್ಲೆಯನ್ನು ಸಹ ಮಾಡಿರುವುದಿಲ್ಲ. ಕಾರ್ಯಕತರ್ರು ನಮ್ಮ ಪ್ರಾರ್ಥನಾ ಸ್ಥಳಕ್ಕೆ ಬಂದು, ದಾಂಧಲೆ ನಡೆಸಿದ್ದಲ್ಲದೆ, ದಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡಿದ್ದಾರೆ. ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸಂಘಪರಿವಾರದ ಕಾರ್ಯಕರ್ತರ ಹೇಳಿಕೆ ಸುಳ್ಳು ಎಂದು ವಿವರಿಸಿದರು. ಘಟನೆಗೆ ಸಂಬಂಧಿಸಿದಂತೆ ತಾಲೂ ಕು ದಂಡಾಧಿಕಾರಿ ಅವರು ಮುಂಜಾಗ್ರತ ಕ್ರಮವಾಗಿ ಎರಡೂ ಕಡೆಯವರ ವಿರುದ್ಧ ಪೊಲೀಸ್ ದೂರು ನೀಡಿದ್ದು, ಶಾಂತಿಯಿಂದ ವರ್ತಿಸುವಂತೆ ತಿಳಿಸಲಾಗಿದೆ.

ಸ್ಥಳಕ್ಕೆ ಸಂಬಂಧಿಸಿದಂತೆ ಪರವಾನಿಗೆ ಹಾಗೂ ಇತರ ಎಲ್ಲ ಅಗತ್ಯ ದಾಖಲೆಗಳು ನಮ್ಮ ಬಳಿ ಇವೆ. ನಾವು ಯಾವುದೇ ರೀತಿ ಕಾನೂನು ಬಾಹಿರ ಕೆಲಸವನ್ನು ಇಲ್ಲಿ ನಡೆಸುತ್ತಿಲ್ಲ. ಕೇವಲ ಇಲ್ಲಿ ಪ್ರಾರ್ಥನೆ ಮಾತ್ರ ನಡೆಯುತ್ತದೆ. ನಾವು ಸಹ ಭಾರತೀಯರು ಹಾಗೂ ದೇಶದ ಮೂಲ ನಿವಾಸಿಗಳು. ಈ ಊರಿನಲ್ಲಿ ಹುಟ್ಟಿ, ಇಲ್ಲೇ ಬೆಳೆದಿದ್ದೇವೆ.  ನಮ್ಮನ್ನು ಪರಕೀಯರ ರೀತಿಯಲ್ಲಿ ಸಂಘಪರಿವಾರದ ಕಾರ್ಯಕರ್ತರು ವರ್ತಿಸುತ್ತಿರುವುದು ಅಮಾನವೀಯವಾದದ್ದು ಎಂದು ಫಾದರ್ ಸುರೇಶ್ ಪೌಲ್ ಹೇಳಿದರು.

ಮತಾಂತರ ಮಾಡುತ್ತಿಲ್ಲ:  ಸಂವಿಧಾನಾತ್ಮಕವಾಗಿ ಹಾಗೂ ಕಾನೂನಾತ್ಮಕವಾಗಿ ಪ್ರಾರ್ಥನೆ ನಡೆಸುತ್ತಿದ್ದ ನಮ್ಮ ಮೇಲೆ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಲು ಮುಂದಾಗಿದ್ದರು. ಕೆಲವು ಮಾಧ್ಯಮಗಳಲ್ಲಿ ನಾವು ಮತಾಂತರ ಹಾಗೂ ಹಲ್ಲೆ ಮಾಡಿದೆವು ಎಂಬ ಸುದ್ದಿ ಪ್ರಕಟವಾಗಿದೆ. ಇದು ಶುದ್ಧ  ಸುಳ್ಳು ಎಂದು ಫಾದರ್ ಸುರೇಶ್ ಪೌಲ್ ಹೇಳಿದರು.

ಸಂಘಪರಿವಾರದ ಕಾರ್ಯಕರ್ತರ ವರ್ತನೆ ಹೀಗೇ ಮುಂದುವರಿದರೆ, ಎಲ್ಲ ಕ್ರೈಸ್ತ ಬಾಂಧವರು ಒಂದಾಗಿ ಸಂಘಪರಿವಾರದ ವಿರುದ್ಧ ್ಧ ಹೋರಾಟವನ್ನು ನಡೆಸುತ್ತೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಸುಳ್ಳು ವರದಿಗಳು ಪ್ರಕಟವಾಗಿವೆ. ತಾಲೂಕು ಆಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಮುಂದಿನ ದಿನಗಳಲ್ಲಿ ನಾವು ನಡೆಸುವ ಪ್ರಾರ್ಥನಾ ಸಭೆಗಳಿಗೆ ಅಗತ್ಯ ಭದ್ರತೆಯನ್ನು ನೀಡಬೇಕು.

-ಜೋಯಲ್ ಕುಮಾರ್ , ಕರ್ನಾಟಕ ಕ್ರೈಸ್ತ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ

 ಅನೈತಿಕ ಪೊಲೀಸ್ ಗಿರಿಯನ್ನು ನಾನು ಸಹಿಸುವುದಿಲ್ಲ. ಕಾನೂನನನ್ನು ಕೈಗೆತ್ತಿಕೊಳ್ಳುವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ್ದೇನೆ. ಬಲವಂತದ ಅಥವಾ ಆಮಿಷಕ್ಕೆ ಒಳಗಾಗಿ ಮತಾಂತರ ಮಾಡುವುದು ಕಾನೂನು ಬಾಹಿರ. ಇದಕ್ಕೂ ನನ್ನ ವಿರೋಧವಿದೆ. ಆದರೆ, ಪ್ರಾರ್ಥನೆ ಸಲ್ಲಿಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ ಅಸಭ್ಯವಾಗಿ ವರ್ತಿಸುವುದನ್ನು ವಿರೋಧಿಸುತ್ತೇನೆ. ಇಂಥಹ ಪ್ರಕರಣಗಳು ಮರುಕಳಿಸದಂತೆ ಸಂಘಟನೆಗಳ ಮೇಲೆ ಕಣ್ಣಿಡುವಂತೆ ತಾಲೂಕು ಆಡಳಿತಕ್ಕೆ ತಿಳಿಸಿದ್ದೇನೆ. ಇದು ರಾಜಕೀಯ ಪ್ರೇರಿತ ಘಟನೆಯಾಗಿದೆ. ರಾಜಕೀಯ ಪ್ರಭಾವವನ್ನು ಬೆಳೆಸಿಕೊಳ್ಳಲ್ಲು ಕೆಲವರು ಮುಂದಾಗಿದ್ದಾರೆ.

-ಲಿಂಗೇಶ್, ಶಾಸಕ ಬೇಲೂರು ವಿಧಾನ ಸಭಾ ಕ್ಷೇತ್ರ

ನಂಬಿಕೆಗಳನ್ನು ಹಾಗೂ ಧರ್ಮದ ಆಚರಣೆಗಳು ನಡೆಸುವುದು ಸಂವಿಧಾನಾತ್ಮಕ ಹಕ್ಕು. ಈ ಹಕ್ಕನ್ನು ಪುಂಡ ೆಕರಿಗಳು ಕಸಿಯಲು ಮುಂದಾದರೆ, ಇದಕ್ಕೆ ಬೇಲೂರಿನ ಜನತೆ ಅವಕಾಶ  ನೀಡುವುವುದಿಲ್ಲ. ಕೊಮುವಾದಿಗಳಿಗೆ ಅಲ್ಪಸಂಖ್ಯಾತರು ಹೆದರುವ ಅಗತ್ಯವಿಲ್ಲ. 
ಇವರೊಂದಿಗೆ ಸರ್ವಸಮಾಜದ ಜನರು ಜೊತೆಗಿದ್ದಾರೆ. ಈ ಸಂಬಂಧ ಪಕ್ಷದ ರಾಜ್ಯ ಮುಖಂಡರಿಗೂ ಮಾಹಿತಿ ನೀಡಲಾಗಿದೆ.

-ಅಬ್ದುಲ್ ಸಮದ್, ಜಿಲ್ಲಾಧ್ಯಕ್ಷರು ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News