ಡಿ.10ರಿಂದ ಕೆಎಸ್ಸಾರ್ಟಿಸಿ ಬಸ್ ಲಗೇಜ್ ದರದಲ್ಲಿ ಏರಿಕೆ

Update: 2021-12-03 02:56 GMT

ಬೆಂಗಳೂರು, ಡಿ.2: ಬಸ್‍ಗಳಲ್ಲಿ ಸಾಗಿಸುವ ಲಗೇಜ್ ದರವನ್ನು ಕೆಎಸ್ಸಾರ್ಟಿಸಿ ಹೆಚ್ಚಳ ಮಾಡಿದ್ದು, ಈ ಪರಿಷ್ಕೃತ ದರ ಡಿ.10ರಿಂದಲೆ ಜಾರಿಗೆ ಬರಲಿದೆ ಎಂದು ಸಾರಿಗೆ ಸಂಸ್ಥೆ ಘೋಷಿಸಿದೆ.

ಸಂಸ್ಥೆ ನಷ್ಟದ ಹಾದಿಯಲ್ಲಿರುವುದರಿಂದ ಲಗೇಜ್ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಕೆಎಸ್ಸಾರ್ಟಿಸಿ ಸಂಸ್ಥೆಯು ಹೇಳಿದೆ. 
ಪ್ರತಿ ಸ್ಟೇಜ್ ಆಧಾರದ ಮೇಲೆ ಲಗೇಜ್ ದರ ಪರಿಷ್ಕರಣೆ ಮಾಡಲಾಗಿದ್ದು, ಶೇ.10ರಷ್ಟು ದರ ಏರಿಕೆ ಮಾಡಲಾಗಿದೆ. ಒಂದರಿಂದ 10ನೆ ಸ್ಟೇಜ್‍ವರೆಗಿನ ಲಗೇಜ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. 11 ರಿಂದ 15ನೆ ಹಂತಕ್ಕೆ ಈ ಹಿಂದೆ ಇದ್ದ 14 ರೂ.ದರವನ್ನು 17 ರೂ.ಗಳಿಗೆ ಏರಿಕೆ ಮಾಡಲಾಗಿದೆ.

ಅದೇ ರೀತಿ 16 ರಿಂದ 20 ನೇ ಹಂತದ ದರವನ್ನು 18 ರಿಂದ 21, 21 ರಿಂದ 25ನೆ ಹಂತಕ್ಕೆ 21 ರಿಂದ 24 ರೂ.ಗಳಿಗೆ, 26 ರಿಂದ 30ನೆ ಹಂತಕ್ಕೆ 25 ರಿಂದ 28, 31 ರಿಂದ 35ನೆ ಹಂತಕ್ಕೆ 29ರಿಂದ 32, 36ರಿಂದ 40ನೆ ಹಂತಕ್ಕೆ 33 ರಿಂದ 36, 41 ರಿಂದ 45ನೆ ಹಂತಕ್ಕೆ 36 ರಿಂದ 39, 46 ರಿಂದ 50ನೆ ಹಂತಕ್ಕೆ 40 ರಿಂದ 43, 51 ರಿಂದ 55ನೆ ಹಂತಕ್ಕೆ 44 ರಿಂದ 47, 56ರಿಂದ 60ನೆ ಹಂತಕ್ಕೆ 48 ರಿಂದ 51, 61 ರಿಂದ 65ನೆ ಹಂತಕ್ಕೆ 51 ರಿಂದ 54ಕ್ಕೆ ಹಾಗೂ 66ರಿಂದ 70ನೆ ಹಂತಕ್ಕೆ 55 ರೂಗಳಿಂದ 58 ರೂ.ಗಳಿಗೆ ದರ ಏರಿಕೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News