ಮುಸ್ಲಿಮರ ಶೈಕ್ಷಣಿಕ ಅಭಿವೃದ್ಧಿಗೆ ವೈಜ್ಞಾನಿಕ ಪದ್ಧತಿ- ರಚನಾತ್ಮಕ ಕಾರ್ಯ ಯೋಜನೆ ಅಗತ್ಯ: ಶಾಫಿ ಸಅದಿ

Update: 2021-12-03 06:56 GMT

ಬೀದರ್, ಡಿ.3: ಮುಸ್ಲಿಂ ಸಮುದಾಯದ ಶೈಕ್ಷಣಿಕ ಅಭಿವೃದ್ಧಿಗೆ ವೈಜ್ಞಾನಿಕ ಪದ್ಧತಿ ಮತ್ತು ರಚನಾತ್ಮಕ ಕಾರ್ಯ ಯೋಜನೆಗಳನ್ನು ರೂಪಿಸಲು ಪಣತೊಟ್ಟು ಶ್ರಮಿಸುವ ಅಗತ್ಯ ಇದೆ ಎಂದು ಕರ್ನಾಟಕ ರಾಜ್ಯ ವಕ್ಪ್ ಬೋರ್ಡ್ ಅಧ್ಯಕ್ಷ ಮೌಲಾನ ಶಾಫಿ ಸಅದಿ ಅಭಿಪ್ರಾಯಿಸಿದ್ದಾರೆ.

ಬೀದರ್ ನಲ್ಲಿ ಶಾಹೀನ್ ಸಂಸ್ಥೆ ಆಯೋಜಿಸಿದ್ದ 'ರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನ-2021'ದಲ್ಲಿ ದೇಶದ ಶಿಕ್ಷಣ ತಜ್ಞರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

 ಶಿಕ್ಷಣದ ಹಳೆಯ ಪದ್ದತಿ ಮತ್ತು ಮಾದರಿಯು ಆಧುನೀಕರಣವಾಗಬೇಕು. ಈಗಿನ ಸ್ಥಿತಿಯಲ್ಲಿ ನಾವು ಸಮಸ್ಯೆಗಳೇ ತುಂಬಿರುವ ಶಿಕ್ಷಣ ಸಂಸ್ಥೆಯಿಂದ ಹೊರಬಂದ ಲಕ್ಷಾಂತರ ಯುವ ಸಮೂಹವನ್ನು ಸರಿಪಡಿಸಲು ಸಮಯ - ಹಣ ಮತ್ತು ಜ್ಞಾನ ಬಳಸುತ್ತಿದ್ದೇವೆ. ಈ ಯುವ ಸಮೂಹಕ್ಕೆ ಸರಿಯಾದ ರೀತಿಯಲ್ಲಿ ಶಿಕ್ಷಣ, ಸೂಕ್ತ ಮಾರ್ಗದರ್ಶನ ನೀಡಿದರೆ ಅದು ಪೋಷಕರ ಹೊರೆ ಮತ್ತು ಆತಂಕವನ್ನು ಕಡಿಮೆಗೊಳಿಸಬಹುದು ಎಂದವರು ಹೇಳಿದರು.

ವಕ್ಪ್ ನ ಆಸ್ತಿಯನ್ನು ಸಮುದಾಯದ ಶಿಕ್ಷಣಕ್ಕೆ ಹೆಚ್ಚು ಉಪಯೋಗಿಸುವಲ್ಲಿ ಚಿಂತನೆ ಮಾಡಿದ್ದೇನೆ. ರಾಜ್ಯಾದ್ಯಂತ ಇರುವ ವಕ್ಪ್ ಆಸ್ತಿಯ ವಿವರ ಮತ್ತು ಅವಕಾಶವನ್ನು ಅಧ್ಯಯನ ಮಾಡುತ್ತಿದ್ದೇನೆ ಎಂದು ಶಾಫಿ ಸಅದಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News