×
Ad

ಗೋದ್ರಾ ಘಟನೆಯ ಮೋದಿಗೂ, ಈಗಿನ ಮೋದಿಗೂ ಬಹಳ ವ್ಯತ್ಯಾಸ ಇದೆ: ಎಚ್.ಡಿ ದೇವೇಗೌಡ

Update: 2021-12-05 22:26 IST
photo: twitter@H_D_Devegowda

ಮಂಡ್ಯ, ಡಿ.5: 'ಗೋದ್ರಾ ಘಟನೆಯ ಮೋದಿಗೂ, ಈಗಿನ ಮೋದಿಗೂ ಬಹಳ ವ್ಯತ್ಯಾಸ ಇದೆ. ಗೋದ್ರಾ ಘಟನೆಯನ್ನು ನಾನು ಖಂಡಿಸಿ   ಮಾತನಾಡಿರುವುದು ದಾಖಲೆ ಇದೆ' ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಹೇಳಿದ್ದಾರೆ. 

ರವಿವಾರ ಶ್ರೀರಂಗಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಕಳೆದ ಲೋಕಸಭಾ ಚುನಾವಣೆ ವೇಳೆ ಬಿಜೆಪಿ 273 ಸ್ಥಾನ ಗೆದ್ದರೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದೆ. ನನ್ನ ಘೋಷಣೆಯಂತೆ ರಾಜೀನಾಮೆ ನೀಡಲು ಹೋದಾಗ ಮೋದಿ ಅವರು ಸ್ವೀಕರಿಸಲಿಲ್ಲ ಎಂದು ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶಂಸಿದರು.

ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಜತೆ ಹೊಂದಾಣಿಕೆ ಬಗ್ಗೆ ಸೋಮವಾರ(ಡಿ.6)ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ನ ನಿಲುವು ಪ್ರಕಟಿಸಲಿದ್ದಾರೆ ಎಂದು ಜೆಡಿಎಸ್ ವರಿಷ್ಠ ಎಚ್. ಡಿ.ದೇವೇಗೌಡ ಹೇಳಿದ್ದಾರೆ.

ನಮ್ಮ ಅಭ್ಯರ್ಥಿ ಅಪ್ಪಾಜಿಗೌಡರ ಗೆಲುವಿಗೆ ನಮ್ಮ ಎಲ್ಲಾ ಶಾಸಕರು, ಮುಖಂಡರು ಒಗ್ಗಟ್ಟಿನಿಂದ ಶ್ರಮಿಸುತ್ತಿದ್ದಾರೆ. ಆದರೆ, ಆರೋಪ ಬಂದ ಹಿನ್ನೆಲೆಯಲ್ಲಿ ನಾನು  ಇಲ್ಲಿಗೆ ಬಂದಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಕೆ.ಕುಮಾರಸ್ವಾಮಿ, ಜೆಡಿಎಸ್ ಶಾಸಕರು, ಅಭ್ಯರ್ಥಿ ಎನ್. ಅಪ್ಪಾಜಿಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News