ಚಿಕ್ಕಮಗಳೂರಿನ ವಸತಿ ಶಾಲೆಯಲ್ಲಿ ಮತ್ತೆ ಕೊರೋನ ಆತಂಕ; ನಾಲ್ಕು ದಿನಗಳಲ್ಲಿ 107 ಮಂದಿಗೆ ಕೋವಿಡ್ ದೃಢ

Update: 2021-12-06 05:30 GMT

ಚಿಕ್ಕಮಗಳೂರು: ಬಾಳೆಹೊನ್ನೂರು ಸಮೀಪದ ಸಿಗೋಡುನಲ್ಲಿರುವ ವಸತಿ ಶಾಲೆಯೊಂದರಲ್ಲಿ  ಮತ್ತೆ ಕೊರೋನ ಆತಂಕ ಉಂಟಾಗಿದ್ದು, ಕೊರೋನ ಪ್ರಕರಣ 107ಕ್ಕೆ ಏರಿಕೆಯಾಗಿದೆ.

ರವಿವಾರ 69 ಕೊರೋನ ಪ್ರಕರಣ ಪತ್ತೆಯಾಗಿತ್ತು. ಸೋಮವಾರ ಮತ್ತೆ 38 ಕೊರೋನ ಪ್ರಕರಣ ಪತ್ತೆಯಾಗಿದ್ದು, ನಾಲ್ಕೇ ದಿನದಲ್ಲಿ ಒಂದೇ ವಸತಿ ಶಾಲೆಯ 94 ವಿದ್ಯಾರ್ಥಿಗಳು, 13 ಶಿಕ್ಷಕರರು ಸೇರಿದಂತೆ 107 ಮಂದಿಯಲ್ಲಿ ಕೊರೋನ ದೃಢವಾಗಿದೆ.

ಮೊದಲು ಇಲ್ಲಿನ ಶಿಕ್ಷಕರಿಗೊಬ್ಬರಿಗೆ ಕೊರೋನ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ 418 ವಿದ್ಯಾರ್ಥಿಗಳು, ಸಿಬ್ಬಂದಿಯ ಸ್ವ್ಯಾಬ್ ಪಡೆದು ತಪಾಸಣೆ ನಡೆಸಿದ ಆರೋಗ್ಯ ಇಲಾಖೆ ಈ ವೇಳೆ 67 ಮಂದಿಯಲ್ಲಿ ಸೋಂಕು ಪತ್ತೆಯಾಗಿರುವುದನ್ನು ದೃಢಪಡಿಸಿದೆ.

ಬಳಿಕ 418 ವಿಧ್ಯಾರ್ಥಿಗಳು, ಸಿಬ್ಬಂದಿ ಗಳ ಸ್ವ್ಯಾಬ್ ಪಡೆದಿದ್ದ ಆರೋಗ್ಯ ಇಲಾಖೆ ಕೋವಿಡ್ ಪರೀಕ್ಷೆ ನಡೆಸಿತ್ತು. 418 ರಲ್ಲಿ 107 ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ.

ಈಗಾಗಲೇ ಸ್ಥಳದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಸೋಂಕಿತರನ್ನು ವಸತಿ ಶಾಲೆಯಲ್ಲೇ ಕ್ವಾರಂಟೈನ್ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News