ನನಗೆ ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳು ಶತ್ರುಗಳೇ, ಮಿತ್ರರಲ್ಲ: ಕುಮಾರಸ್ವಾಮಿ

Update: 2021-12-06 12:34 GMT

ಮಂಡ್ಯ: 'ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್ ಜೊತೆ ಮೈತ್ರಿ ಬಗ್ಗೆ ಯಡಿಯೂರಪ್ಪ ನನ್ನ ಬೆಂಬಲ ಕೇಳಿದ್ದಾರೆ. ನಾನು ಮೈತ್ರಿ ಮಾಡುವ ಕುರಿತು ಎಲ್ಲಿಯೂ ಹೇಳಿಲ್ಲ. ನಮ್ಮ ಅಭ್ಯರ್ಥಿಗೆ ಬಿಜೆಪಿಯವರು ಸಹಕರಿಸುತ್ತಿಲ್ಲ, ನನಗೆ  ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳು ಶತ್ರುಗಳೇ, ಮಿತ್ರರಲ್ಲ' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. 

ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಗೆ ಮೈತ್ರಿ ಮಾಡಿಕೊಳ್ಳುವ ಕುರಿತು ಮಂಗಳವಾರ ಸುದ್ದಿಗೋಷ್ಠಿ ಕರೆದು ತಿಳಿಸುತ್ತೇನೆ ಎಂದು ಹೇಳಿದರು. 

ಜನರ ಕಷ್ಟವನ್ನೆಲ್ಲ ನೋಡಿದಾಗ ನನ್ನ ಹೃದಯ ಮಿಡಿಯುತ್ತದೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಒಂದೆರಡು ದುರಂತ ನಡೆಯಿತು. ಅದನ್ನು ನೋಡಿ ನನ್ನ ಕಣ್ಣಲ್ಲಿ ನೀರು ಬಂತು. ಕೆಲವರು ಅದನ್ನೇ ಟೀಕಿಸಿದ್ದರು. ನಾನು ಇನ್ನು ಮುಂದೆ ಕಣ್ಣೀರು ಹಾಕಬಾರದು ಎಂದು ನಿರ್ಧರಿಸಿದ್ದೇನೆ ಎಂದು ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.

“ದೇವೇಗೌಡರ ಮನೆಯಲ್ಲಿ ಮಾತ್ರ ಕುಟುಂಬ ರಾಜಕಾರಣವಿಲ್ಲ. ಸಿದ್ದರಾಮಯ್ಯ ಸೇರಿದಂತೆ ಹಲವರ ಕುಟುಂಬದಲ್ಲಿ ಶಾಸಕರು ಇದ್ದಾರೆ.  ಒಂದು ಕುಟುಂಬದಲ್ಲಿ ಇಷ್ಟೇ ಜನರು ಶಾಸಕರು ಇರಬೇಕು ಎಂಬ ನಿಯಮವಿಲ್ಲ. ಈ ಬಗ್ಗೆ ಸಂವಿಧಾನಕ್ಕೆ ತಿದ್ದುಪಡಿ ತರಲಿ. ಅದನ್ನು ಪಾಲಿಸಬಹುದು.”

-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News