ಒಮೈಕ್ರಾನ್ ಸೋಂಕು ತಡೆಗಟ್ಟಲು ಏಳು ಐಎಎಸ್ ಅಧಿಕಾರಿಗಳಿಗೆ ವಿಶೇಷ ಜವಾಬ್ದಾರಿ ನೀಡಿ ಸರಕಾರ ಆದೇಶ

Update: 2021-12-06 13:48 GMT

ಬೆಂಗಳೂರು, ಡಿ. 6: ರಾಜ್ಯದಲ್ಲಿ ಹಬ್ಬುತ್ತಿರುವ ಕೋವಿಡ್ ರೂಪಾಂತರಿ ಒಮೈಕ್ರಾನ್ ಸೋಂಕು ತಡೆಗಟ್ಟಲು ಹೆಚ್ಚಿನ ನಿಗಾ ವಹಿಸಲು ಮತ್ತು ಸಮರ್ಥ ರೀತಿಯಲ್ಲಿ ಮೇಲುಸ್ತುವಾರಿ ಮಾಡಲು ಮುನೀಶ್ ಮೌದ್ಗಿಲ್ ಸಹಿತ ಏಳು ಮಂದಿ ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ.

ಪ್ರಸ್ತು ವಿಪತ್ತು ನಿರ್ವಹಣಾ ಅಧಿನಿಯಮ 2005ರ ಪ್ರಕರಣ 24ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ರಾಜ್ಯ ಕಾರ್ಯಕಾರಿ ಸಮಿತಿ ಅಧ್ಯಕ್ಷರ ನಿರ್ದೇಶನದಂತೆ, ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡಂತೆ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.

ಅಧಿಕಾರಿಗಳ ಪಟ್ಟಿ:

ಮುನೀಶ್ ಮೌದ್ಗಿಲ್-ರಾಜ್ಯ ವಾರ್ ರೂಂ, ಆಕ್ಸಿಜನ್ ಪೂರೈಕೆ ಹಾಗೂ ಇತರೆ ಜವಾಬ್ದಾರಿ, ಪಂಕಜ್ ಕುಮಾರ್ ಪಾಂಡೆ-ಹೋಂ ಐಸೋಲೇಷನ್ ನಿರ್ವಹಣೆ, ಎಂ. ಶೀಖಾ-ಅಂತರ್‍ರಾಷ್ಟ್ರೀಯ ವಿಮಾನ ಪ್ರಯಾಣಿಕರ ಸ್ಕ್ರೀನಿಂಗ್, ಪ್ರತಾಪ್ ರೆಡ್ಡಿ ಮತ್ತು ಗುಂಜನ್ ಕೃಷ್ಣ-ಆಮ್ಲಜನಕ ಪೂರೈಕೆ, ಶಿಲ್ಪಾನಾಗ್-ಸರ್ವೀವೆಲೆನ್ಸ್ ನೋಡಲ್ ಆಫೀಸರ್, ರಾಜ್ಯ ಸರ್ವೀವೆಲೆನ್ಸ್ ಯುನಿಟ್, ಕುಮಾರ್ ಪುಷ್ಕರ್- ಕೇಂದ್ರೀಕೃತ ಆಸ್ಪತ್ರೆ ಹಾಸಿಗೆ ವ್ಯವಸ್ಥೆ ಹಾಗೂ ಎಂ.ಟಿ.ರೇಜು ಅವರು ಔಷಧಿ ಮೇಲುಸ್ತುವಾರಿ ವಹಿಸಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News