ಮಹದಾಯಿ ಹೋರಾಟಗಾರರಿಗೆ ಕೋರ್ಟ್‍ನಿಂದ ಸಮನ್ಸ್ ಜಾರಿ

Update: 2021-12-06 14:53 GMT
ಫೈಲ್ ಚಿತ್ರ- (ಮಹದಾಯಿ ಹೋರಾಟಗಾರರು)

ಧಾರವಾಡ, ಡಿ.6: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ 13ಕ್ಕೂ ಹೆಚ್ಚು ಮಹದಾಯಿ ಹೋರಾಟಗಾರರಿಗೆ ನವಲಗುಂದ ಜೆಎಂಎಫ್‍ಸಿ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

ಇವರೆಲ್ಲರೂ 2015ರಲ್ಲಿ ಮಹದಾಯಿ ನೀರಿಗಾಗಿ ಹೋರಾಟ ಮಾಡಿದ್ದರು. ಇವರಿಗೆ ಡಿ.7ರಂದು ಕೊರ್ಟ್‍ಗೆ ಹಾಜರಾಗಲು ಸೂಚಿಸಲಾಗಿದೆ. 

ಈ ಹಿಂದೆ ಸರಕಾರ ಎಲ್ಲ ಮಹದಾಯಿ ಹೋರಾಟಗಾರರ ಕೇಸ್ ವಾಪಸ್ ಪಡೆದ ಬಗ್ಗೆ ಹೇಳಿತ್ತು. ಆದರೆ, ಈಗ ಹೋರಾಟಗಾರರಿಗೆ ಸಮನ್ಸ್ ಜಾರಿಯಾಗಿರುವುದು ಹೋರಾಟಗಾರರಲ್ಲಿ ಆತಂಕ ಮೂಡಿಸಿದೆ. 

ತಾಂತ್ರಿಕ ಸಮಸ್ಯೆ ಇದ್ದರೆ ಪರಿಹರಿಸಿ

‘ಮಹದಾಯಿ ಹೋರಾಟಗಾರರ ಕೇಸ್‍ನ್ನು ರಾಜ್ಯ ಸರಕಾರ ವಾಪಸ್ ಪಡೆದ ಬಳಿಕವೂ ನವಲಗುಂದ ಕೋರ್ಟ್‍ನಿಂದ ಹೋರಾಟಗಾರರಿಗೆ ಸಮನ್ಸ್ ಜಾರಿಯಾಗಿದೆ. ಈ ಕೂಡಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪರಿಶೀಲನೆ ಮಾಡಲಿ, ತಾಂತ್ರಿಕ ಸಮಸ್ಯೆಯಿದ್ದರೆ ಪರಿಹರಿಸಲಿ.’

-ಎನ್.ಎಚ್.ಕೋನರೆಡ್ಡಿ, ಜೆಡಿಎಸ್ ಮುಖಂಡ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News