×
Ad

ಕಲಬುರಗಿ: ಮರಳು ಗುಡ್ಡೆಯಲ್ಲಿ ಬಾಲಕನ ಮೃತದೇಹ ಪತ್ತೆ; ಕೊಲೆ ಶಂಕೆ

Update: 2021-12-07 19:37 IST

ಕಲಬುರಗಿ: ನಗರದ ಫಿರ್ದೋಸ್ ನಗರ ಬಡಾವಣೆಯ ಸುಣ್ಣದ ಬಟ್ಟಿಯ ಬಳಿಯ ನಿರ್ಮಾಣ ಹಂತದ ಕಟ್ಟಡದ ಬಳಿ ಹಾಕಲಾಗಿದ್ದ ಮರಳಿನಲ್ಲಿ ಎರಡು ವರ್ಷದ ಬಾಲಕನ ಮೃತದೇಹ ಪತ್ತೆಯಾಗಿದೆ.

ಮುಹಮ್ಮದ್ ಮುಝಮ್ಮಿಲ್(2) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ.

ಇಂದು ಮರಳಿನ ಗುಡ್ಡೆಯಿಂದ ಕಾರ್ಮಿಕರು ಮರಳು ಹೊರ ತೆಗೆಯುತ್ತಿರುವಾಗ ಬಾಲಕನ ಮೃತದೇಹ ಪತ್ತೆಯಾಗಿದೆ. ಮೃತ ಬಾಲಕ ನಿನ್ನೆ ಬೆಳಗ್ಗೆ ಮನೆಯಿಂದ ನಾಪತ್ತೆಯಾಗಿದ್ದ ಎನ್ನಲಾಗಿದೆ.

ಸ್ಥಳಕ್ಕೆ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News