ವಿಮಾನ ನಿಲ್ದಾಣಗಳಲ್ಲಿ ಕೋವಿಡ್ ಪರೀಕ್ಷೆ: ದರ ನಿಗದಿ

Update: 2021-12-07 14:46 GMT
ಸಾಂದರ್ಭಿಕ ಚಿತ್ರ (PTI)

ಬೆಂಗಳೂರು, ಡಿ.7: ಕೋವಿಡ್-19ರ ಹೊಸ ರೂಪಾಂತರಿ ತಳಿ ಒಮೈಕ್ರಾನ್ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಅಂತರ್‌ರಾಷ್ಟ್ರೀಯ ಪ್ರಯಾಣಿಕರಿಗೆ ಕಟ್ಟುನಿಟ್ಟಿನ ತಪಾಸಣೆ ಹಾಗೂ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೋವಿಡ್‌ಗೆ ಸಂಬಂಧಿಸಿದ ವಿವಿಧ ಪರೀಕ್ಷೆಗಳ ದರ ನಿಗದಿ ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.

ವಿವಿಧ ಕೋವಿಡ್ ಪರೀಕ್ಷೆಗಳ ಲಭ್ಯತೆಯಿಂದ ಪ್ರಯಾಣಿಕರನ್ನು ಶೀಘ್ರವಾಗಿ ಪರೀಕ್ಷೆಗೆ ಒಳಪಡಿಸುವುದೆ ಅಲ್ಲದೆ ಪ್ರಯಾಣಿಕರು ವಿಮಾನ ನಿಲ್ದಾಣಗಳ ಆವರಣದಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮಗಳ ಪಾಲನೆಯನ್ನೂ ಖಚಿತಪಡಿಸಿಕೊಳ್ಳಬಹುದಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿಮಾನ ನಿಲ್ದಾಣಗಳಲ್ಲಿನ ಕೋವಿಡ್ ಪರೀಕ್ಷಾ ಪ್ರಯೋಗಾಲಯದಲ್ಲಿ ಕೋಷ್ಠಕದಲ್ಲಿರುವ ಐಸಿಎಂಆರ್ ಪ್ರಮಾಣಿತ ಕೋವಿಡ್ ಪರೀಕ್ಷೆಗಳು, ನಿಗದಿತ ದರದಲ್ಲಿ ಲಭ್ಯವಾಗಲಿವೆ.

ಆರ್‌ಟಿಪಿಸಿಆರ್ ಕನ್ವೆಂಷನಲ್-500 ರೂ., ಅಬೋಟ್ ಐಡಿ- 3 ಸಾವಿರ ರೂ., ಥರ್ಮೋ ಫಿಶರ್ ಅಕ್ಯೂಲಾ-1500 ರೂ., ಟಾಟಾ ಎಂಡಿ3 ಜೆನೆ ಫಾಸ್ಟ್/ಟಾಟಾ ಎಂಡಿಎಕ್ಸ್ಎಫ್-1200 ರೂ. ಹಾಗೂ ಸೆಫೈಡ್ ಜೆನೆ ಎಕ್ಸ್ಪರ್ಟ್-2750 ರೂ.ಎಂದು ದರ ನಿಗದಿ ಮಾಡಲಾಗಿದೆ.

ಈ ಚಟುವಟಿಕೆಯನ್ನು ತ್ವರಿತವಾಗಿ ಹಾಗೂ ಸಮರ್ಪಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ, ಈ ಮೇಲಿನ ಪರೀಕ್ಷೆಗಳನ್ನು ನಡೆಸುವ ಸಂದರ್ಭದಲ್ಲಿ ಐಸಿಎಂಆರ್‌ನ ಪರೀಕ್ಷಾ ಶಿಷ್ಟಾಚಾರಗಳ ಪಾಲನೆ ಹಾಗೂ ನಿಗದಿಪಡಿಸಿರುವ ದರಗಳ ಪಾಲನೆಯನ್ನು ವಿಮಾನ ನಿಲ್ದಾಣಗಳಲ್ಲಿನ ಸಂಬಂಧಪಟ್ಟ ಪ್ರಾಧಿಕಾರಗಳು ಖಚಿತಪಡಿಸಿಕೊಳ್ಳುವಂತೆ ಆದೇಶದಲ್ಲಿ ಸೂಚನೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News