ಎಂ.ಸಿ. ಲಂಕೇಶ್‌ಗೆ ಅಂಬೇಡ್ಕರ್ ರಾಷ್ಟ್ರೀಯ ಫೆಲೋಶಿಪ್ ಪುರಸ್ಕಾರ

Update: 2021-12-07 17:49 GMT

ಮಂಡ್ಯ, ಡಿ.7: ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರೀಯ ಫೆಲೋಶಿಪ್ ಪುರಸ್ಕಾರಕ್ಕೆ ರಾಜ್ಯ ಯುವಪ್ರಶಸ್ತಿ ಪುರಸ್ಕೃತ ಎಂ.ಸಿ.ಲಂಕೇಶ್ ಮಂಗಲ ಆಯ್ಕೆಯಾಗಿದ್ದಾರೆ ಎಂದು ನವ ದೆಹಲಿಯ ದಲಿತ ಸಾಹಿತ್ಯ ಅಕಾಡೆಮಿ ಸಂಚಾಲಕ ಸುಂಡಹಳ್ಳಿ ನಾಗರಾಜ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನವದೆಹಲಿಯಲ್ಲಿರುವ ದಲಿತ ಸಾಹಿತ್ಯ ಅಕಾಡೆಮಿಯು 2021ನೇ ಸಾಲಿನ ವಾರ್ಷಿಕ ಸಮಾರಂಭದಲ್ಲಿ ಡಿ.11ರಂದು ಪುರಸ್ಕಾರವನ್ನು ಪ್ರಧಾನ ಮಾಡಲಾಗುವುದು ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ನೆಲದನಿ ಬಲಗದ ಕಾರ್ಯಾದರ್ಶಿ ಸಂತೆಕಸಲಗೆರೆ ಎಲ್.ಕೆ. ಯೋಗೇಶ್, ಕಾಗೇಹಳ್ಳಿದೊಡ್ಡಿ ಜಯಮ್ಮ ಅವರಿಗೆ ಮಾಹಾತ್ಮ ಜ್ಯೋತಿಬಾ ಫುಲೆ ರಾಷ್ಟ್ರ ಪ್ರಶಸ್ತಿ ಪುರಸ್ಕಾರ, ಮಾರಸಿಂಗನಹಳ್ಳಿ ಟಿ.ಪ್ರತಾಪ್ ಮತ್ತು ಲೋಕಸರ ಮಹದೇವಸ್ವಾಮಿ ಅವರಿಗೆ ಅಂಬೇಡ್ಕರ್ ಪ್ರಶಸ್ತಿ, ಕೋಮಲ್‌ಕುಮಾರ್ ಮತ್ತು ಸಿ.ಲೋಕೇಶ್ ಹಾಗೂ ಉಮಾಪತಿ ಅವರಿಗೆ ಭಗವಾನ್ ಗೌತಮ ಬುದ್ಧ ಪ್ರಶಸ್ತಿ, ಮಹಿಳಾ ಸಂಘಟಕಿ ಮಹಾಲಕ್ಷ್ಮಿ ಕೋಮಲ್‌ಕುಮಾರ್ ಹಾಗೂ ಕೆ.ಜೆ.ರತ್ನ ಅವರಿಗೆ ಸಾವಿತ್ರಿಬಾ ಫುಲೆ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಲಂಕೇಶ್ ಕಳೆದ 18 ವರ್ಷಗಳಿಂದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿಬ್ಬಾಣ ಮತ್ತು ಹುಟ್ಟಿದ ದಿನದಂದು ಆರೋಗ್ಯ ಶಿಬಿರ, ರಕ್ತದಾನ, ಪರಿಸರ ಜಾಗೃತಿ, ಕೆರೆ ಅಭಿವೃದ್ದಿ, ಗ್ರಾಮೀಣ ಕ್ರೀಡೆಗಳ ಪೋಷಣೆ, ಯುವಕರಿಗೆ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News