ಸೋಮವಾರಪೇಟೆ: ಕಾಡಾನೆಗಳ ಹಾವಳಿ; ಕೃಷಿ ನಾಶ
Update: 2021-12-08 18:01 IST
ಸೋಮವಾರಪೇಟೆ: ತಾಲೂಕಿನ ಆಡಿನಾಡೂರು ಹಾಗು ಹೊಸಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿಯಿಂದ ಕೃಷಿ ಪಸಲು ನಷ್ಟವಾಗುತ್ತಿರುವ ಹಿನ್ನೆಲೆ ರೈತರು ಕಂಗಾಲಾಗಿದ್ದಾರೆ.
ಜೋಳ, ಕ್ಯಾನೆಗೆಣಸು, ಸಿಹಿ ಗೆಣಸು ಫಸಲನ್ನು ಕಾಡಾನೆಗಳು ನಷ್ಟಗೊಳಿಸುತ್ತಿವೆ. ಇದರಿಂದ ಕೃಷಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಇನ್ನೊಂದೆಡೆ ಅಕಾಲಿಕ ಮಳೆಯಿಂದಾಗಿ ಈ ಭಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಫಸಲು ನಷ್ಟವಾಗಿದೆ.
ಗಣಗೂರು ಗ್ರಾಮ ಪಂಚಾಯಿತಿಗೆ ಒಳಪಡುವ ಆಡಿನಾಡೂರು ಮತ್ತು ನೇರುಗಳಲೆ ಪಂಚಾಯಿತಿಗೆ ಒಳಪಡುವ ಹೊಸಳ್ಳಿ ಗ್ರಾಮಗಳಲ್ಲಿ ಕಾಡಾನೆಯ ಗುಂಪು ಬೀಡುಬಿಟ್ಟಿದೆ. ಗ್ರಾಮದ ತೋಟ, ಗದ್ದೆ, ಹೊಲಗಳಲ್ಲಿರುವ ಫಸಲುಗಳನ್ನು ಧ್ವಂಸಗೊಳಿಸಿವೆ.
ಕಾಡಾನೆಗಳ ಹಾವಳಿ ಹೀಗೆ ಮುಂದುವರೆದರೆ ಜೀವನ ಸಾಗಿಸುವುದು ದುಸ್ತರವಾಗಲಿದೆ. ಅರಣ್ಯ ಇಲಾಖೆ ತಕ್ಷಣ ಕಾರ್ಯಪ್ರವೃತ್ತರಾಗಿ ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂದು ಕೃಷಿಕರು ಆಗ್ರಹಿಸಿದ್ದಾರೆ.