ಸಚಿವ ಸಂಪುಟ ವಿಸ್ತರಣೆ: ವರಿಷ್ಠರ ತೀರ್ಮಾನಕ್ಕೆ ಬದ್ಧ ಎಂದ ಶಾಸಕ ಅರವಿಂದ ಬೆಲ್ಲದ್

Update: 2021-12-08 12:55 GMT
ಶಾಸಕ ಅರವಿಂದ ಬೆಲ್ಲದ್

ಹುಬ್ಬಳ್ಳಿ, ಡಿ. 8: ‘ಮುಂದಿನ ತಿಂಗಳ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಗಳಿದ್ದು, ನನ್ನ ವಿಷಯದಲ್ಲಿ ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ನಾನು ಬದ್ಧ' ಎಂದು ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಶಾಸಕರಾಗಿ ಆಯ್ಕೆಯಾಗುವ ಎಲ್ಲರಿಗೂ ಸಚಿವರಾಗುವ ಇಚ್ಛೆ ಇರುತ್ತದೆ. ಆದರೆ, ಸಂಪುಟದಲ್ಲಿ ಸಚಿವ ಸ್ಥಾನಗಳು ಸೀಮಿತ ಇರುವುದರಿಂದ ಎಲ್ಲರಿಗೂ ಅವಕಾಶ ಸಿಗುವುದಿಲ್ಲ' ಎಂದು ತಿಳಿಸಿದರು.

‘ಸಿಎಂ ಬೊಮ್ಮಾಯಿ ಕ್ರಿಯಾಶೀಲವಾಗಿ ಆಡಳಿತ ನಡೆಸುತ್ತಿದ್ದು, ಅವರೊಬ್ಬ ಪ್ರಬುದ್ಧ ಉತ್ತಮ ಆಡಳಿತಗಾರ. ಉನ್ನತ ಶೈಕ್ಷಣಿಕ ಹಿನ್ನೆಲೆ ಇದ್ದವರೇ ಆಡಳಿತದ ಚುಕ್ಕಾಣಿ ಹಿಡಿಯಬೇಕು ಎನ್ನುವುದಕ್ಕಿಂತ, ರಾಜಕೀಯ ಅನುಭವ ಸಾಕಷ್ಟು ಇರಬೇಕು. ಸಚಿವ ಈಶ್ವರಪ್ಪ ಅವರು ಈಗಾಗಲೇ ತಮ್ಮ ಹೇಳಿಕೆಗೆ ಸ್ಪಷ್ಟಣೆ ನೀಡಿದ್ದಾರೆ ಎಂದು ಅರವಿಂದ ಬೆಲ್ಲದ್ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News