×
Ad

ಪಿಕಪ್ ಢಿಕ್ಕಿ: ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತ್ಯು

Update: 2021-12-08 19:36 IST

ಚಿಕ್ಕಮಗಳೂರು, ಡಿ.8: ಬೊಲೆರೋ ವಾಹನ ಹಾಗೂ ಬೈಕ್ ನಡುವೆ ಸಂಬಂಧಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಬೈಕ್‍ನಲ್ಲಿದ್ದ ಮೂವರು ಸವಾರರ ಪೈಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬುಧವಾರ ತಾಲೂಕಿನ ದೇವರಹಳ್ಳಿ ಗೇಟ್ ಬಳಿ ನಡೆದಿದೆ.

ಮೃತರನ್ನು ಹಾಸನ ಜಿಲ್ಲೆಯ ಅರಸೀಕೆರೆ ಮೂಲದವರು ಎಂದು ಗುರುತಿಸಲಾಗಿದ್ದು, ಕೆಲಸದ ನಿಮಿತ್ತ ಬುಧವಾರ ಅರಸೀಕೆರೆಯಿಂದ ಚಿಕ್ಕಮಗಳೂರು ನಗರಕ್ಕೆ ಒಂದೇ ಬೈಕ್‍ನಲ್ಲಿ ಆಗಮಿಸಿದ್ದ ಮೂವರು ಸಂಜೆ ವೇಳೆ ಒಂದೇ ಬೈಕ್‍ನಲ್ಲಿ ಅರಸೀಕೆರೆಗೆ ಹಿಂದಿರುಗುತ್ತಿದ್ದ ವೇಳೆ ತಾಲೂಕಿನ ದೇವರಹಳ್ಳಿ ಗೇಟ್ ಎಂಬಲ್ಲಿ ಎದುರಿನಿಂದ ವೇಗವಾಗಿ ಆಗಮಿಸಿದ ಬೊಲೆರೋ ವಾಹನ ಢಿಕ್ಕಿ ಹೊಡೆದಿದೆ. 

ಢಿಕ್ಕಿಯ ರಭಸಕ್ಕೆ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವ ಸವಾರನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಚಿಕ್ಕಮಗಳೂರು ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News