ಇದು ವೈಯಕ್ತಿಕ ಲಾಭದ ಸಮಯ ಸಾಧಕತನ: ಸಿದ್ದರಾಮಯ್ಯ ವಿರುದ್ಧ ಚೇತನ್ ಅಹಿಂಸಾ ಟೀಕೆ
Update: 2021-12-11 12:18 IST
ಬೆಂಗಳೂರು: ತಮ್ಮ ಪಕ್ಷದ ಭ್ರಷ್ಟಾಚಾರ, ಕುಟುಂಬ ರಾಜಕಾರಣದ ಕುರಿತು ಮಾತನಾಡದೆ ಇನ್ನೊಂದು ಪಕ್ಷದ ವಿರುದ್ಧ ಮಾತನಾಡುವುದು ಸಿದ್ದರಾಮಯ್ಯರ ವೈಯಕ್ತಿಕ ಲಾಭದ ಸಮಯ ಸಾಧಕತನ ಎಂದು ನಟ ಚೇತನ್ ಅಹಿಂಸಾ ಟೀಕಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಚೇತನ್, 'ಕುಟುಂಬ ರಾಜಕಾರಣದ ಮೂಲಕ ಕಾಂಗ್ರೆಸ್ಸಿನ ಸ್ವಜನ ಪಕ್ಷಪಾತವನ್ನು ವಿರೋಧಿಸುವುದಿಲ್ಲ, ಆದರೆ ಜೆಡಿಎಸ್ ನ ಕುಟುಂಬ ರಾಜಕಾರಣವನ್ನು ಮಾತ್ರ ವಿರೋಧಿಸುತ್ತೇನೆ ಎಂದು ಸಿದ್ಧರಾಮಯ್ಯನವರು ಇತ್ತೀಚೆಗೆ ಹೇಳಿರುವುದು ಅವರ ವೈಯಕ್ತಿಕ ಲಾಭದ ಸಮಯ ಸಾಧಕತನ' ಎಂದು ದೂರಿದ್ದಾರೆ.
''ಸಿದ್ದರಾಮಯ್ಯನವರು ತಮ್ಮ ಪಕ್ಷದ ಭ್ರಷ್ಟಾಚಾರವನ್ನು ವಿರೋಧಿಸುವುದಿಲ್ಲ, ಮತ್ತೊಂದು ಪಕ್ಷದ ಭ್ರಷ್ಟಾಚಾರವನ್ನು ಮಾತ್ರ ವಿರೋಧಿಸುತ್ತಾರೆ'' ಎಂದು ನಟ ಚೇತನ್ ಹೇಳಿದ್ದಾರೆ.
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) December 11, 2021