ಮತಾಂತರ ನಿಷೇಧ ಕಾಯ್ದೆ: ಇದು ಅಂತರ್ ರಾಷ್ಟ್ರೀಯ ವಿಷಯವಾಗಿದೆ ಎಂದ ಡಿ.ಕೆ ಶಿವಕುಮಾರ್

Update: 2021-12-11 12:39 GMT
photo: @DKShivakumar

ಬೆಂಗಳೂರು: ಸೋಮವಾರ ಆರಂಭವಾಗುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ `ಮತಾಂತರ ನಿಷೇಧ ತಿದ್ದುಪಡಿ ಮಸೂದೆ' ಮಂಡನೆಗೆ ರಾಜ್ಯ ಸರಕಾರ ಸಿದ್ಧತೆ ನಡೆಸಿದ್ದು, 'ಇದು ಕೇವಲ ರಾಜ್ಯಕ್ಕೆ ಮಾತ್ರ ಸಂಬಂಧಿಸಿದ ವಿಷಯವಲ್ಲ. ಇದು ಅಂತರ್ ರಾಷ್ಟ್ರೀಯ ವಿಷಯವಾಗಿದೆ' ಎಂದು ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. 

ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆ ವಿಚಾರವಾಗಿ ಬಿಜೆಪಿಯವರು ಎರಡು ಪ್ಲ್ಯಾನ್ ಹೊಂದಿದ್ದಾರೆ. ಒಂದು ಅಫೀಸಿಯಲ್ ಆಗಿ ಕಾಯ್ದೆ ಜಾರಿ ಮಾಡೋದು, ಇನ್ನೊಂದು ಖಾಸಗಿಯಾಗಿ ಮಸೂದೆ  ಮಂಡನೆ‌ ಮಾಡೋಡು. ಈ ಎರಡು ಪ್ಲ್ಯಾನ್ ಮಾಡಿಕೊಂಡಿರುವ ಬಿಜೆಪಿ ಮತಾಂತರ ಕಾಯ್ದೆ ಪಾಸ್ ಮಾಡಿಕೊಳ್ಳಲು ಮುಂದಾಗಿದೆ ಎಂದು ತಿಳಿಸಿದರು. 

ನಾವು ಆ ಬಿಲ್ ಗೆ ಖಡಾಖಂಡಿತವಾಗಿ ವಿರೋಧ ಮಾಡುತ್ತೇವೆ ಎಂದ ಅವರು, ಚುನಾವಣೆ ಸಮೀಪಿಸುತ್ತಿರುವಾಗಲೇ ಬಿಜೆಪಿ ಒಂದೊಂದು ಸಮುದಾಯವನ್ನು ಟಾರ್ಗೆಟ್ ಮಾಡಿ, ಹಿಂಸೆ ಕೊಡುತ್ತಿದೆ ಎಂದು ಆರೋಪಿಸಿದರು. 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News