×
Ad

ಹನೂರು: ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದ 20 ಮೇಕೆಗಳು ಸಾವು

Update: 2021-12-11 20:33 IST

ಹನೂರು: ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದ 20 ಮೇಕೆಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ  ಹನೂರು ತಾಲೂಕಿನ ಕಾಂಚಳ್ಳಿ ಗ್ರಾಮದಲ್ಲಿ ನಡೆದಿದೆ.

ಕಾಂಚಳ್ಳಿ  ಗ್ರಾಮದಲ್ಲಿ ಮೇಕೆಗಳನ್ನು  ಸಾಕಿ ಜೀವನ ಸಾಗಿಸುತ್ತಿದ್ದ, ಜಡೇಯಾ ಅವರಿಗೆ ಸೇರಿದ ಈ ಮೇಕೆಗಳು ಇಂದು ಬೆಳಿಗ್ಗೆ ನೋಡಿದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ನೆನ್ನೆ ಸಂಜೆ ಮೇಕೆಗಳನ್ನು ಮೇಯಿಸಿಕೊಂಡು ಬಂದು ಕೊಟ್ಟಿಗೆಗೆ ಕೂಡಿ ಹಾಕಲಾಗಿತ್ತು. ಮೇಕೆಗಳ ನಿಗೂಢ ಸಾವಿನಿಂದ ಮೇಕೆಗಳನ್ನು ಸಾಕಿದ್ದ ವ್ಯಕ್ತಿ ಕಂಗಾಲಾಗಿದ್ದು, ಪರಿಹಾರಕ್ಕಾಗಿ ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ. ಸ್ಥಳಕ್ಕೆ ಪಶುವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News