ರಾಜ್ಯದಲ್ಲಿಂದು 320 ಮಂದಿಗೆ ಕೊರೋನ ದೃಢ, 2 ಮಂದಿ ಮೃತ್ಯು

Update: 2021-12-11 17:08 GMT

ಬೆಂಗಳೂರು, ಡಿ.11: ರಾಜ್ಯದಲ್ಲಿ ಶನಿವಾರ 320 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 2 ಮಂದಿ ಸೋಂಕಿಗೆ ಬಲಿಯಾಗಿದ್ದು, 317 ಜನರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 30,00,105ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 38,257ಕ್ಕೆ ತಲುಪಿದೆ.

ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 7306ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

2 ಸೋಂಕಿತರು ಬಲಿ: ಬೆಂಗಳೂರು ನಗರಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. 

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 320 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಳ್ಳಾರಿ 4, ಬೆಳಗಾವಿ 4, ಬೆಂಗಳೂರು ಗ್ರಾಮಾಂತರ 4, ಬೆಂಗಳೂರು ನಗರ 190, ಚಾಮರಾಜನಗರ 2, ಚಿಕ್ಕಮಗಳೂರು 10, ದಕ್ಷಿಣಕನ್ನಡ 20, ಹಾಸನ 17, ಕಲಬುರಗಿ 1, ಕೊಡಗು 21, ಮಂಡ್ಯ 7, ಮೈಸೂರು 14, ಶಿವಮೊಗ್ಗ 3, ತುಮಕೂರು 9, ಉಡುಪಿ 2, ಉತ್ತರಕನ್ನಡ 4, ವಿಜಯಪುರ ಜಿಲ್ಲೆಯಲ್ಲಿ 3 ಪ್ರಕರಣ ಪತ್ತೆಯಾಗಿದೆ.  

ರಾಜಧಾನಿಯಲ್ಲಿ 190 ಜನರಿಗೆ ಕೊರೋನ ದೃಢ

ರಾಜಧಾನಿಯಲ್ಲಿ ಶನಿವಾರದಂದು 190 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.

ನಗರದಲ್ಲಿ ಇಲ್ಲಿಯವರೆಗೆ ಒಟ್ಟು 12,58,699 ಕೊರೋನ ಸೋಂಕಿತರು ದೃಢಪಟ್ಟಿದ್ದು, ಒಟ್ಟು 16,362 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು 12,36,789 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳಲ್ಲಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News