×
Ad

ಮತಾಂತರ ನಿಷೇಧ ವಿಧೇಯಕವನ್ನು ಈ ಅಧಿವೇಶನದಲ್ಲೇ ಮಂಡಿಸಲಿದ್ದೇವೆ: ಬಿ.ಎಸ್.ಯಡಿಯೂರಪ್ಪ

Update: 2021-12-13 18:03 IST

ಬೆಳಗಾವಿ, ಸುವರ್ಣಸೌಧ, ಡಿ.13: ಬಿಜೆಪಿ ಜಾರಿಗೊಳಿಸುವ ಮಸೂದೆಗಳನ್ನು ವಿರೋಧ ಮಾಡುವುದೇ ಸಿದ್ದರಾಮಯ್ಯ ಅವರ ಸ್ವಭಾವ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟೀಕಿಸಿದರು.

ಸೋಮವಾರ ಸುವರ್ಣಸೌಧದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ ನಿಷೇಧ ವಿಧೇಯಕವನ್ನು ಈ ಅಧಿವೇಶನದಲ್ಲೇ ಮಂಡಿಸಲಿದ್ದೇವೆ. ಇದಕ್ಕೆ ಅನಗತ್ಯವಾಗಿ ವಿರೋಧ ಮಾಡದೇ ಕಾಂಗ್ರೆಸ್ ಸಹಕಾರ ಕೊಡಬೇಕು ಎಂದರು.

ಅಗತ್ಯವಿದ್ದರೆ, ಕಾಯ್ದೆ ಬಗ್ಗೆ ಚರ್ಚೆ ಮಾಡಲಿ. ಬೇರೆ ಬೇರೆ ರಾಜ್ಯಗಳಲ್ಲಿಯೂ ಈ ಕಾಯ್ದೆ ಇದೆ. ನಮ್ಮ ರಾಜ್ಯದಲ್ಲೂ ಜಾರಿಗೊಳಿಸುವ ಕೆಲಸ ನಡೆಸಲಾಗುತ್ತಿದೆ. ಮತ್ತೊಂದೆಡೆ ಇಂತಹ ಕಾಯ್ದೆ ಜಾರಿಗೆ ಮುಂದಾಗಿರುವ ನಮ್ಮ ಕ್ರಮವನ್ನು ಕೆಲ ಕಾಂಗ್ರೆಸ್ಸಿಗರು ಸ್ವಾಗತಿಸಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News