×
Ad

ಸಾಗರ: ಅಕ್ರಮ ಜಿಂಕೆ ಮಾಂಸ ಹೊಂದಿದ್ದ ಇಬ್ಬರ ಬಂಧನ

Update: 2021-12-13 19:55 IST

ಸಾಗರ,ಡಿ.13: ತಾಲೂಕಿನ ಉಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಳಸಗೋಡು ಗ್ರಾಮದಲ್ಲಿ ಅಕ್ರಮವಾಗಿ ಜಿಂಕೆಮಾಂಸವನ್ನು ಹೊಂದಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. 

ಬಳಸಗೋಡು ಗ್ರಾಮದ ಪ್ರಶಾಂತ್ ಮತ್ತು ಗಾಮಪ್ಪ ಎಂಬುವವರು ಜಿಂಕೆ ಮಾಂಸ ಮತ್ತು ಚರ್ಮವನ್ನು ಹೊಂದಿರುವ ಖಚಿತ ಮಾಹಿತಿ ಮೇಲೆ ದಾಳಿ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳು ಗಾಮಪ್ಪನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ನೋರ್ವ ಆರೋಪಿ ಪ್ರಶಾಂತ್ ತಪ್ಪಿಸಿಕೊಂಡಿದ್ದಾನೆ. 

ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್ ಮತ್ತು ಎಸಿಎಫ್ ಶ್ರೀಧರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಪ್ರಮೋದ್, ಉಪ ವಲಯ ಅರಣ್ಯಾಧಿಕಾರಿ ಸುಂದರಮೂರ್ತಿ, ಅರಣ್ಯ ರಕ್ಷಕರಾದ ಪ್ರವೀಣಕುಮಾರ್, ಬಸವರಾಜ್, ವಾಹನ ಚಾಲಕ ಲೋಕೇಶಕುಮಾರ್ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News