×
Ad

ವಿಧಾನ ಪರಿಷತ್ ಚುನಾವಣೆ: ಬೆಂಗಳೂರು ನಗರ ಕ್ಷೇತ್ರದಲ್ಲಿ ಗೋಪಿನಾಥ್ ರೆಡ್ಡಿಗೆ ಗೆಲುವು, ಕೆಜಿಎಫ್ ಬಾಬುಗೆ ಸೋಲು

Update: 2021-12-14 11:37 IST
ಬಿಜೆಪಿ ವಿಜೇತ ಅಭ್ಯರ್ಥಿ ಹೆಚ್.ಎಸ್.ಗೋಪಿನಾಥ್ ರೆಡ್ಡಿ

ಬೆಂಗಳೂರು: ವಿಧಾನ ಪರಿಷತ್ ಬೆಂಗಳೂರು ನಗರ ಕ್ಷೇತ್ರದ  ಬಿಜೆಪಿ ಅಭ್ಯರ್ಥಿ ಹೆಚ್.ಎಸ್.ಗೋಪಿನಾಥ್ ರೆಡ್ಡಿಗೆ ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಯೂಸುಫ್ ಷರೀಫ್ (ಕೆಜಿಎಫ್ ಬಾಬು) ಪರಾಭವಗೊಂಡಿದ್ದಾರೆ. 

ಬಿಜೆಪಿ ಅಭ್ಯರ್ಥಿ ಹೆಚ್.ಎಸ್.ಗೋಪಿನಾಥ್ ರೆಡ್ಡಿ, ಕಾಂಗ್ರೆಸ್‌ ಅಭ್ಯರ್ಥಿ ಕೆಜಿಎಫ್ ಬಾಬು ವಿರುದ್ಧ 400 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. 

ಸೋಲಿನ ಬಳಿಕ ಆಟೊ ರಿಕ್ಷಾ ಹತ್ತಿ ಹೊರಟ ಕಾಂಗ್ರೆಸ್ ಅಭ್ಯರ್ಥಿ: ಮತ ಎಣಿಕೆ ಕಾರ್ಯ ಆರಂಭವಾಗುತ್ತಿದ್ದಂತೆ ಮತ ಕೇಂದ್ರಕ್ಕೆ ಆಗಮಿಸಿದ್ದ ಕೆಜಿಎಫ್ ಬಾಬು ಫಲಿತಾಂಶದ ಬಳಿಕ  ಆಟೊ ರಿಕ್ಷಾ ಹತ್ತಿ ಹೊರಟಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News