ಕೊಡಗು: ನಿವೃತ್ತಿಯ ಹೊಸ್ತಿಲಲ್ಲಿದ್ದ ಪಿಎಸ್ಸೈ ನಿಧನ
Update: 2021-12-15 12:29 IST
ಮಡಿಕೇರಿ ಡಿ.15: ಕೊಡಗು ಜಿಲ್ಲೆಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ ಪೊಲೀಸ್ ನಿಯಂತ್ರಣ ಕೊಠಡಿಯ ಪಿಎಸ್ಸೈಡಬ್ಲ್ಯು ಚಿನ್ನಪ್ಪ ನಾಯಕರು ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಮೃತರು ಕಳೆದ ತಿಂಗಳು ಪಿಎಸ್ಸೈ ಆಗಿ ಭಡ್ತಿ ಹೊಂದಿದ್ದರು. ಈ ತಿಂಗಳ ಕೊನೆಯಲ್ಲಿ ನಿವೃತ್ತಿ ಹೊಂದಬೇಕಾಗಿತ್ತು. ಚಿನ್ನಪ್ಪ ನಾಯಕರ ನಿಧನಕ್ಕೆ ಕೊಡಗು ಪೊಲೀಸರು ಸಂತಾಪ ಸೂಚಿಸಿದ್ದಾರೆ.