ಮೊಟ್ಟೆಗಳು ಸಸ್ಯಾಹಾರಿಯೂ ಅಲ್ಲ, ಮಾಂಸಾಹಾರಿಯೂ ಅಲ್ಲ: ಚೇತನ್ ಅಹಿಂಸಾ ತಿರುಗೇಟು

Update: 2021-12-15 12:06 GMT

ಬೆಂಗಳೂರು: ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವುದನ್ನು ವಿರೋಧಿಸುವವರಿಗೆ ತಿರುಗೇಟು ನಿಡಿರುವ ನಟ ಚೇತನ್ ಅಹಿಂಸಾ 'ಮೊಟ್ಟೆಗಳು ಸಸ್ಯಾಹಾರಿಯೂ ಅಲ್ಲ, ಮಾಂಸಾಹಾರಿಯೂ ಅಲ್ಲ' ಎಂದು ಹೇಳಿದ್ದಾರೆ. 

ಚೇತನ್ ಅಹಿಂಸಾ ಅವರ ಟ್ವೀಟ್ ಇಂತಿವೆ:

ಮೊಟ್ಟೆಗಳು ಸಸ್ಯಾಹಾರಿಯೂ ಅಲ್ಲ ಅಥವಾ ಮಾಂಸಾಹಾರಿ ಅಲ್ಲ  (ಫಲವತ್ತಾಗದ) ಮೊಟ್ಟೆಗ ಅವು ಕೋಳಿಗಳಿಂದ ಬರುತ್ತವೆ ಎಂಬ ಕಾರಣಕ್ಕೆ ಅದನ್ನು ನಿಷೇಧಿಸಿದರೆ, ಹಸುಗಳಿಂದ ಬರುವ ಎಲ್ಲಾ ಡೈರಿಗಳನ್ನು ನಿಷೇಧಿಸಬೇಕು. ಹಾಲು, ಬೆಣ್ಣೆ , ಮೊಸರು ಇವೆಲ್ಲವನ್ನೂ ನಿಷೇಧಿಸಬೇಕು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಧಾರ್ಮಿಕ ಲಾಬಿಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಬದಲು ಮಕ್ಕಳ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು  ಎಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News