×
Ad

ಹಳೆ ಬಸ್‍ಗಳನ್ನು ಗುಜರಿಗೆ ಹಾಕಲು ಕ್ರಮ: ಸಚಿವ ಶ್ರೀರಾಮುಲು

Update: 2021-12-15 17:15 IST

ಬೆಳಗಾವಿ, ಡಿ. 15: ಕೇಂದ್ರ ಸರಕಾರದ ನೀತಿಯ ಅನ್ವಯ 15 ವರ್ಷ ಪೂರೈಸಿದ ಅಥವಾ 9 ಲಕ್ಷ ಕಿ.ಮೀ ಕ್ರಮಿಸಿದ ಸಂಸ್ಥೆಯ ಎಲ್ಲ ಬಸ್‍ಗಳನ್ನು ಗುಜರಿಗೆ ಹಾಕಲು ಕ್ರಮ  ವಹಿಸಲಾಗಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಅಪ್ಪಚ್ಚು ರಂಜನ್ ಕೇಳಿದ ಪ್ರಶ್ನೆ ಉತ್ತರಿಸುವ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಡಿ.ಕೆ. ಶಿವಕುಮಾರ್ ಕೇಳಿದ ಪ್ರಶ್ನೆ ಪ್ರತಿಕ್ರಿಯಿಸಿ ಅವರು, ಸಾರಿಗೆ ಸಂಸ್ಥೆಗಳ ಎಲ್ಲ ಡಿಪೋಗಳಲ್ಲಿಯೂ 15 ವರ್ಷ ಪೂರೈಸಿದ ಮತ್ತು 9 ಲಕ್ಷ ಕಿ.ಮೀ ಕ್ರಮಿಸಿದ ವಾಹನಗಳನ್ನು ಗುಜರಿಗೆ ಕಳುಹಿಸಲಾಗುವುದು ಎಂದರು. ಆರ್ಥಿಕ ಮಿತಿಯನ್ನು ಗಮನದಲ್ಲಿರಿಸಿಕೊಂಡು ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ವಿಭಾಗೀಯ ಕಾರ್ಯಾಗಾರ ಆರಂಭಿಸಲು ಕ್ರಮ ವಹಿಸಲಾಗುವುದು ಎಂದು ಅಪ್ಪಚ್ಚು ರಂಜನ್ ಪ್ರಶ್ನೆಗೆ ಉತ್ತರಿಸಿದರು.

ಕೋವಿಡ್ ಹಿನ್ನೆಲೆಯಲ್ಲಿ ನಿಲ್ಲಿಸಿದ್ದ ಗ್ರಾಮೀಣ ಪ್ರದೇಶದಲ್ಲಿನ ಸಾರಿಗೆ ಬಸ್ ಸಂಚಾರವನ್ನು ಪುನರ್ ಆರಂಭಿಸಲು ಸರಕಾರ ಕ್ರಮ ವಹಿಸಲಿದೆ. ಅಲ್ಲದೆ, ಕುಣಿಗಲ್ ಕ್ಷೇತ್ರದಲ್ಲಿ ಕೆಲವು ಗ್ರಾಮಗಳಿಗೆ ಬಸ್ ಸಂಚಾರಕ್ಕೆ ಹದಗೆಟ್ಟಿದ್ದರೂ ಬಸ್ ಓಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ

-ಬಿ. ಶ್ರೀರಾಮುಲು ಸಾರಿಗೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News