×
Ad

ಶೀಘ್ರದಲ್ಲೇ 275 ಪಶು ಆ್ಯಂಬುಲೆನ್ಸ್ ಸೇವೆ: ಸಚಿವ ಪ್ರಭು ಬಿ. ಚವ್ಹಾಣ್

Update: 2021-12-15 22:52 IST

ಬೆಳಗಾವಿ ಸುವರ್ಣ ವಿಧಾನಸೌಧ, ಡಿ.15: ಕರ್ನಾಟಕ ಇತಿಹಾಸದಲ್ಲೇ ಮೊದಲ ಬಾರಿಗೆ ಬರೋಬ್ಬರಿ 275 ಪಶು ಸಂಜೀವಿನಿ ಆ್ಯಂಬುಲೆನ್ಸ್ ಸೇವೆ ಕೈಗೆತ್ತಿಕೊಳ್ಳಲಾಗಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ. ಚವ್ಹಾಣ್ ತಿಳಿಸಿದರು.

ಬುಧವಾರ ಪರಿಷತ್ತಿನ ಪ್ರಶ್ನೋತ್ತರ ವೇಳೆ ಎಂ.ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಅನಾರೋಗ್ಯ ಪೀಡಿತ, ಅವಘಡ ಸೇರಿದಂತೆ ಗೋವಿನ ಶುಶ್ರೂಷೆಗಾಗಿ ರಾಜ್ಯದ ಪ್ರತಿ ತಾಲೂಕಿಗೊಂದು ಸುಸಜ್ಜಿತ ಪಶು ಸಂಜೀವಿನಿ ಆ್ಯಂಬುಲೆನ್ಸ್ ನೀಡುತ್ತೇವೆ. ಒಟ್ಟು ರಾಜ್ಯದಲ್ಲಿ 275 ಆ್ಯಂಬುಲೆನ್ಸ್ ಸಂಚಾರ ಮಾಡಲಿವೆ ಎಂದು ಹೇಳಿದರು.

ಸದ್ಯ ಪಶುಸಂಜೀವಿನಿ ಆ್ಯಂಬುಲೆನ್ಸ್‍ಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಪ್ರತಿ ತಾಲೂಕು ಸೇರಿದಂತೆ ರಾಜ್ಯಕ್ಕೆ 275 ಆ್ಯಂಬುಲೆನ್ಸ್ ನೀಡುತ್ತೇವೆ. ಪಶು ಸಂಜೀವಿನಿ ಆ್ಯಂಬುಲೆನ್ಸ್‍ಗಾಗಿ 1962 ಈ ನಂಬರ್‍ಗೆ ಕರೆ ಮಾಡಿದರೆ ಸ್ಥಳಕ್ಕೆ ಬರುತ್ತದೆ. ಇದರಲ್ಲಿ ತಜ್ಞ ವೈದ್ಯರು ಸೇರಿದಂತೆ ಚಿಕಿತ್ಸೆಗೆ ಬೇಕಾದ ಎಲ್ಲಾ ರಕ್ಷಣೆ ಸಲಕರಣೆಗಳು ಇರುತ್ತದೆ ಎಂದು ಸಚಿವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News