ಕನ್ನಡ ಧ್ವಜಕ್ಕೆ ಅವಮಾನ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ
Update: 2021-12-16 16:35 IST
ಶಿವಮೊಗ್ಗ : ಬೆಳಗಾವಿಯಲ್ಲಿ ಎಂಇಎಸ್ ಮತ್ತು ಶಿವಸೇನೆ ಪುಂಡರು ಕನ್ನಡ ಧ್ವಜ ಹರಿದು ಅವಮಾನಿಸಿದ್ದು, ಕೂಡಲೇ ಅವರನ್ನು ಬಂಧಿಸಬೇಕು ಮತ್ತು ಹೋರಾಟ ಮಾಡಿದ ಕನ್ನಡ ಪರ ಕಾರ್ಯಕರ್ತರನ್ನು ಪೋಲೀಸರು ವಶಕ್ಕೆ ಪಡೆದಿದ್ದು, ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಬುಧವಾರ ಸಂಜೆ ನಗರದ ಗೋಪಿ ವೃತ್ತದಲ್ಲಿ ಪಂಜು ಹಿಡಿದು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಪ್ರಮುಖರಾದ ಎಸ್. ಮಧು, ಕೇಬಲ್ ಮಂಜು, ಧನಂಜಯ್, ಅಮರೇಗೌಡ, ವಿಜಯಕುಮಾರ್, ಶೈಲೇಶ್ ಕುಮಾರ್ ಮೊದಲಾದವರಿದ್ದರು.
ಕನ್ನಡ ಧ್ವಜಕ್ಕೆ ಅವಮಾನಿಸಿದ ವಿರುದ್ಧ ಶಿವಮೊಗ್ಗ ಜಿಲ್ಲಾ ಜಯ ಕರ್ನಾಟಕ ಸಂಘಟನೆ ವತಿಯಿಂದ ನಗರದ ಬಸ್ ನಿಲ್ದಾಣದ ಅಶೋಕ ವೃತ್ತದಲ್ಲಿ ಬುಧವಾರ ಸಂಜೆ ಟೈಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಡಾ. ದೀಪಕ್, ಪದಾಧಿಕಾರಿಗಳಾದ ಅಬ್ದುಲ್ ರಹೀಂ, ನಾಸಿರ್, ಸಿಖಂದರ್, ದಿವ್ಯರಾಜ್, ಸತೀಶ್, ಮೊದಲಾದವರಿದ್ದರು.