ಕಾಂಗ್ರೆಸ್ 'ಕಮಿಷನ್ ಪಿತಾಮಹ' ಎಂದ ಶಾಸಕ ಸಿ.ಟಿ.ರವಿ
Update: 2021-12-16 18:08 IST
ಬೆಳಗಾವಿ, ಡಿ.16: ಕಮಿಷನ್ ಪಿತಾಮಹ ಕಾಂಗ್ರೆಸ್ ಪಕ್ಷವೇ ಆಗಿದ್ದು, ಅವರಿಗೆ ಪ್ರತಿಭಟನೆ ಮಾಡುವ ನೈತಿಕತೆ ಇಲ್ಲವೆಂದು ಬಿಜೆಪಿ ಶಾಸಕ ಸಿ.ಟಿ.ರವಿ ಟೀಕಿಸಿದರು.
ಗುರುವಾರ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ಗೆ ಪ್ರತಿಭಟನೆ ಮಾಡುವ ಯಾವ ನೈತಿಕತೆ ಇದೆ. ಪ್ರಮುಖ ಮುಖ ಬೆಲೆಯ ನೋಟುಗಳ ನಗದೀಕರಣ ಸಮಯದಲ್ಲಿ ಇಬ್ಬರು ಇಂಜಿನಿಯರ್ ಗಳ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿತ್ತು. ಈ ಇಬ್ಬರೂ ಕಾಂಗ್ರೆಸ್ ನಾಯಕರ ಆಪ್ತರು ಎಂದು ಆರೋಪಿಸಿದರು.
ಬಿಜೆಪಿ ಸರಕಾರದಲ್ಲಿ ಕಮಿಷನ್ ಇಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲವೆಂದು ಅಲ್ಲಗಳೆಯುತ್ತಿಲ್ಲ. ಇದನ್ನು ಕಾಂಗ್ರೆಸ್ ಸರಕಾರ ಆರಂಭ ಮಾಡಿದೆ. ಯಾರೇ ತಪ್ಪು ಮಾಡಿದ್ದರು ಅದು ತಪ್ಪೆ. ಉಪ್ಪು ತಿಂದವನು ನೀರು ಕುಡಿಯಬೇಕು ಎಂದು ತಿಳಿಸಿದರು.