ನಮ್ಮಲ್ಲಿ ಮಂಚ ಮುರಿಯುವವರಿಲ್ಲ: ಸಿ.ಎಂ. ಇಬ್ರಾಹಿಮ್
Update: 2021-12-16 18:26 IST
ಬೆಳಗಾವಿ ಸುವರ್ಣ ವಿಧಾನಸೌಧ, ಡಿ.16: ನಮ್ಮ ಪಕ್ಷದಲ್ಲಿ ಯಾರು ಸಹ ಮಂಚ ಮುರಿಯುವವರು ಇಲ್ಲ. ಬರೀ ನೆಲವೇ ಇರುವುದೆಂದು ವಿಧಾನ ಪರಿಷತ್ತಿನ ಸದಸ್ಯ ಸಿ.ಎಂ.ಇಬ್ರಾಹಿಂ ವ್ಯಂಗ್ಯವಾಡಿದರು.
ಸಿಡಿ ಬಿಡುಗಡೆ ವಿಚಾರ ಸಂಬಂಧ ಕೆಲ ಶಾಸಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು, ಅವರು ಕಾಂಗ್ರೆಸ್ ಸೇರ್ಪಡೆ ವಿಚಾರ ಕುರಿತು ಗುರುವಾರ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಚ ಮುರಿಯುವವರು ನ್ಯಾಯಾಲಯಕ್ಕೆ ಹೋಗುತ್ತಿದ್ದಾರೆ. ಆದರೆ, ನಮ್ಮಲ್ಲಿ ಮಂಚ ಮುರಿಯುವವರು ಯಾರು ಇಲ್ಲ. ನೆಲ ಮಾತ್ರವೇ ಇದೆ ಎಂದರು.
ಪ್ರತಿ ಗುತ್ತಿಗೆ ಕೆಲಸದಲ್ಲಿ ಕಮಿಷನ್ ಪಡೆಯುವ ಬಗ್ಗೆ ನೋಂದಾಯಿತ ಗುತ್ತಿಗೆದಾರರ ಸಂಘ ಆರೋಪ ಮಾಡಿದೆ. ಆರೋಪ ಸುಳ್ಳಿದ್ದರೆ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಿ. ಇಲ್ಲವಾದರೆ ಒಪ್ಪಿಕೊಳ್ಳಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸವಾಲು ಹಾಕುತ್ತೇನೆ ಎಂದರು.