×
Ad

ಶ್ರೀರಂಗಪಟ್ಟಣದಲ್ಲಿ ಸಂಘಪರಿವಾರದ ಸಂಕೀರ್ತನಾ ಯಾತ್ರೆ ವೇಳೆ ಮಾತಿನ ಚಕಮಕಿ

Update: 2021-12-16 19:09 IST

ಮಂಡ್ಯ, ಡಿ.16: ಹನುಮ ಜಯಂತಿ ಅಂಗವಾಗಿ ಶ್ರೀರಂಗಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ಹನುಮಾನ್ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ವೇಳೆ ಸಣ್ಣಪುಟ್ಟ ಮಾತಿನ ಚಕಮಕಿ ನಡೆದಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿಭದ್ರತೆ ಕೈಗೊಂಡಿದ್ದಾರೆ.

ಹಿಂದೂ ಜಾಗರಣಾ ವೇದಿಕೆ ಆಯೋಜಿಸಿದ್ದ ಸಂಕೀರ್ತನಾ ಮೆರವಣಿಗೆ ಪಟ್ಟಣದ ಹೊರವಲಯದ ಗಂಜಾಂ ಬಳಿ ಇರುವ ನಿಮಿಷಾಂಭ ದೇವಾಲಯದಿಂದ ಹೊರಟು ಪಟ್ಟಣದ ಪ್ರಮುಖ ರಸ್ತೆಗಳ ಸಾಗಿ ಶ್ರೀರಂಗನಾಥ ದೇವಾಲಯದ ಬಳಿ ಅಂತ್ಯಗೊಂಡಿತು.

ಮೆರವಣಿಗೆ ಜಾಮಿಯಾ ಮಸೀದಿ ಮಾರ್ಗ ತೆರಳುವಾಗ ಕೆಲವರು ಮೊಬೈಲ್‍ನಲ್ಲಿ ವಿಡೀಯೋ ಮಾಡುತ್ತಿದ್ದಾರೆಂದು ಮಾಲಾಧಾರಿಗಳು ಆಕ್ಷೇಪಿಸಿದರು. ಈ ವೇಳೆ  ಮಾತಿನ ಚಕಮಕಿ ನಡೆದಾಗ ಪೊಲೀಸರು ಮಧ್ಯೆಪ್ರವೇಶಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು ಎನ್ನಲಾಗಿದೆ.

ಮುನ್ನಚ್ಚರಿಕೆ ಕ್ರಮವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ನೇತೃತ್ವದಲ್ಲಿ ಸೂಕ್ತ ಬಿಗಿಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಇಬ್ಬರು ಎಎಸ್ಪಿ, ಐದು ಮಂದಿ ಡಿವೈಎಸ್ಪಿ, 30 ಮಂದಿ ಸಿಪಿಐ, 60 ಪಿಎಸ್ಸೈ, 5 ಕೆಎಸ್‍ಆರ್‍ಪಿ ತುಕಡಿ, 14 ಡಿಎಆರ್ ತುಕಡಿ ಮತ್ತು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News