ಎಲ್ಲ ರೈತರಿಗೂ ಹನಿ ನೀರಾವರಿ ಯೋಜನೆಗೆ ಸಬ್ಸಿಡಿ: ಕೃಷಿ ಸಚಿವ ಬಿ.ಸಿ. ಪಾಟೀಲ್

Update: 2021-12-16 13:57 GMT

ಬೆಳಗಾವಿ, ಡಿ. 16: ಹನಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ರಾಜ್ಯದ ಎಲ್ಲ ಬಗೆಯ ರೈತರಿಗೆ ಗರಿಷ್ಠ ಎರಡು ಹೆಕ್ಟೇರ್‍ವರೆಗೆ ಶೇ.90ರಷ್ಟು ಸಬ್ಸಿಡಿ ನೀಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. 

ಗುರುವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಯು.ಟಿ. ಖಾದರ್ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು, ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ವರ್ಷ ದೊಡ್ಡ ರೈತರಿಗೆ ಸಬ್ಸಿಡಿ ಪ್ರಮಾಣ ಕಡಿತ ಮಾಡಲಾಗಿತ್ತು. ಆದರೆ, ಸಿಎಂ ಬೊಮ್ಮಾಯಿ ಅವರು ಹನಿ ನೀರಾವರಿ ಯೋಜನೆಗಳಿಗೆ ಈ ಹಿಂದಿನಂತೆಯೇ ಸಬ್ಸಿಡಿ ಮುಂದುವರೆಸುವುದರ ಜೊತೆಗೆ ಸಣ್ಣ, ಅತಿಸಣ್ಣ ರೈತರಿಗಷ್ಟೇ ಇದ್ದ ಸೌಲಭ್ಯವನ್ನು ಇತರ ರೈತರಿಗೂ ವಿಸ್ತರಿಸಿದ್ದಾರೆ.

ಎಲ್ಲ ರೀತಿಯ ರೈತರು ಗರಿಷ್ಠ 5 ಹೆಕ್ಟೇರ್ ಪ್ರದೇಶಕ್ಕೆ ಈ ಯೋಜನೆಯ ಅನುಕೂಲ ಪಡೆಯಬಹುದಾಗಿದೆ. ಇದರಿಂದ ಸಣ್ಣ ಮತ್ತು ಅತೀ ಸಣ್ಣ ರೈತರ ದೃಢೀಕರಣ ಪ್ರಮಾಣಪತ್ರ ಪಡೆಯಲು ಆಗುತ್ತಿದ್ದ ಅಡ್ಡಿ ಬಗೆಹರಿದಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News