×
Ad

'ಅತ್ಯಾಚಾರ ಅನಿವಾರ್ಯವಾದರೆ ಆನಂದಿಸಿ' ವಿಧಾನಸಭೆಯಲ್ಲಿ ರಮೇಶ್ ಕುಮಾರ್ ಆಕ್ಷೇಪಾರ್ಹ ಹೇಳಿಕೆ

Update: 2021-12-17 08:07 IST

ಬೆಳಗಾವಿ: ಕಾಂಗ್ರೆಸ್‌ನ ಹಿರಿಯ ಶಾಸಕ ಮತ್ತು ಮಾಜಿ ಸ್ಪೀಕರ್ ಗುರುವಾರ ಸದನದಲ್ಲಿ ನೀಡಿದ  ಹೇಳಿಕೆ ಸದನದಲ್ಲಿ ನಗೆಯ ಅಲೆ ಎಬ್ಬಿಸಲು ಕಾರಣವಾಯಿತು. ರೈತರ ಸಮಸ್ಯೆಗಳ ಚರ್ಚೆಗೆ ಅರೆಮನಸ್ಸಿನ ಒಪ್ಪಿಗೆ ನೀಡಿದ್ದನ್ನು ಖಂಡಿಸುವ ವೇಳೆ ರಮೇಶ್ ಕುಮಾರ್ ಅವರು "ಅತ್ಯಾಚಾರ ಅನಂದಿಸುವಂತೆ" ಎಂಬ ಹೋಲಿಕೆ ನೀಡಿದ್ದರು.

"ರೇಪ್ ಅನಿವಾರ್ಯ ಎನಿಸಿದಾಗ ಮಲಗಿ ಮತ್ತು ಆನಂದಿಸಿ ಎಂಬ ಹೇಳಿಕೆಯಿದೆ. ನೀವು ಪ್ರಸ್ತುತ ಇರುವ ಸ್ಥಿತಿ ಕೂಡಾ ಅದನ್ನು ಹೋಲುತ್ತದೆ" ಎಂದು ಕೆ.ಆರ್.ರಮೇಶ್ ಕುಮಾರ್ ಹೇಳಿದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಹಲವು ಮಂದಿ ಸದಸ್ಯರು ಈ ಹೇಳಿಕೆಯನ್ನು ತಮಾಷೆಯಾಗಿ ತೆಗೆದುಕೊಂಡರು.

ರೈತರ ಸಮಸ್ಯೆಗಳ ಚರ್ಚೆಗೆ ಸಮಯಾವಕಾಶ ನೀಡುವಂತೆ ಕಾಂಗ್ರೆಸ್ ಸದಸ್ಯರು ಆಗ್ರಹಿಸುವ ಸಂದರ್ಭದಲ್ಲಿ ರಮೇಶ್ ಕುಮಾರ್ ಈ ಹೇಳಿಕೆ ನೀಡಿದರು. ಪ್ರತಿಯೊಬ್ಬರಿಗೂ ಸಮಯಾವಕಾಶ ನೀಡಿದರೆ ಅಧಿವೇಶನ ಮುಂದುವರಿಸುವುದಾದರೂ ಹೇಗೆ ಎಂದು ಸ್ಪೀಕರ್ ಪ್ರಶ್ನಿಸಿದರು. ಬಳಿಕ ಕಾಗೇರಿಯವರು, "ನೀವು ಏನು ನಿರ್ಧರಿಸುತ್ತೀರೋ ಅದಕ್ಕೆ ನಾನು ಒಪ್ಪಿಗೆ ನೀಡುತ್ತೇನೆ. ಈ ಕ್ಷಣವನ್ನು ಆಸ್ವಾದಿಸೋಣ ಎನ್ನುವ ಕಲ್ಪನೆ ನನ್ನದು. ವ್ಯವಸ್ಥೆಯನ್ನು ನಾನು ನಿಯಂತ್ರಿಸಲು ಅಥವಾ ನಿರ್ಬಂಧಿಸಲಾರೆ. ನನ್ನ ಕಳಕಳಿ ಇರುವುದು ಸದನದ ಕಲಾಪ. ಇದನ್ನು ಕೂಡಾ ನಡೆಸಬೇಕು" ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯೆಯಾಗಿ ರಮೇಶ್ ಕುಮಾರ್ ಅತ್ಯಾಚಾರ ಪರಿಸ್ಥಿತಿಯ ಹೋಲಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News