×
Ad

'ಅತ್ಯಾಚಾರದ ಕುರಿತು ಆಕ್ಷೇಪಾರ್ಹ ಹೇಳಿಕೆ: ಕ್ಷಮೆ ಕೋರಿದ ರಮೇಶ್ ಕುಮಾರ್

Update: 2021-12-17 10:05 IST

ಬೆಳಗಾವಿ: ವಿಧಾನ ಸಭೆ ಅಧಿವೇಶನದಲ್ಲಿ ಅತ್ಯಾಚಾರದ ಕುರಿತು ಹೇಳಿಕೆಯೊಂದನ್ನು ನೀಡಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸಾರ್ವಜನಿಕ ವಲಯಯದಲ್ಲಿ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಟ್ವಿಟರ್ ನಲ್ಲಿ ಕ್ಷಮೆಯಾಚಿಸಿದ್ದಾರೆ. 

 'ಅತ್ಯಾಚಾರದ' ಕುರಿತು ನಿನ್ನೆಯ ಅಧಿವೇಶನದಲ್ಲಿ ನೀಡಿದ ಅಸಡ್ಡೆ ಮತ್ತು ನಿರ್ಲಕ್ಷ್ಯದ ಹೇಳಿಕೆಗೆ ಎಲ್ಲರಲ್ಲಿಯೂ ಕ್ಷಮೆಯಾಚಿಸುತ್ತೇನೆ. ಅತ್ಯಂತ ಹೇಯವಾದ ಅಪರಾಧವನ್ನು ಅಲಕ್ಷಿಸುವುದು ಅಥವಾ ಹಗುರಗೊಳಿಸುವುದು ನನ್ನ ಉದ್ದೇಶವಾಗಿರಲಿಲ್ಲ, ಅದು ಮಾತಿಗೆ ಸಿದ್ಧವಿರದ ಸ್ಥಿತಿಯಲ್ಲಿ ಬಂದ ಹೇಳಿಕೆಗಳು. ಮುಂದೆ ನಾನು ನನ್ನ ಮಾತುಗಳಲ್ಲಿ ಎಚ್ಚರ ವಹಿಸುತ್ತೇನೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ನಿನ್ನೆ ವಿಧಾನಸಭೆ ಅಧಿವೇಶನದಲ್ಲಿ ರೈತರ ಸಮಸ್ಯೆಗಳ ಚರ್ಚೆಗೆ ಅರೆಮನಸ್ಸಿನ ಒಪ್ಪಿಗೆ ನೀಡಿದ್ದನ್ನು ಖಂಡಿಸುವ ವೇಳೆ ರಮೇಶ್ ಕುಮಾರ್ ಅವರು 'ಅತ್ಯಾಚಾರ ಅನಿವಾರ್ಯವಾದರೆ ಆನಂದಿಸುವ' ಹೇಳಿಕೆ ಯನ್ನು ಉಲ್ಲೇಖಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News