ತುಮಕೂರು: ಹೇಮಾವತಿ ನಾಲೆಗೆ ಹಾರಿ ಇಂಜಿನಿಯರ್, ಪತ್ನಿ ಮತ್ತು ವಿವಾಹಿತ ಪುತ್ರಿ ಆತ್ಮಹತ್ಯೆ
Update: 2021-12-17 10:14 IST
ತುಮಕೂರು : ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಒಂದೇ ಕುಟುಂಬದ ಮೂವರು ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ ಎನ್ನಲಾದ ಘಟನೆ ಗುರುವಾರ ರಾತ್ರಿ ನಡೆದಿದೆ.
ಹೇಮಾವತಿ ನಾಲಾ ಕಚೇರಿಯ ಇಂಜಿನಿಯರ್ ರಮೇಶ್ (55), ಪತ್ನಿ ಶಿಕ್ಷಕಿ ಮಮತಾ (46) ಅವರ ಪುತ್ರಿ ಶುಭ (25) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ. ಒಂದು ತಿಂಗಳ ಹಿಂದೆ ಶುಭ ಅವರ ವಿವಾಹ ನಡೆದಿತ್ತು ಎಂದು ಹೇಳಲಾಗುತ್ತಿದೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.
ಸ್ಥಳಕ್ಕೆ ಪೊಲೀಸ್ ಠಾಣಾಧಿಕಾರಿ ನದಾಫ್ ಚೇಳೂರು, ವಿಜಯ್ ಕುಮಾರಿ ಹಾಗು ಸಿಬ್ಬಂದಿ ಭೇಟಿ ನೀಡಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಈ ಬಗ್ಗೆ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.