ವಿಧಾನ ಮಂಡಲ ಅಧಿವೇಶನ: ಕಾಂಗ್ರೆಸ್ ಶಾಸಕರಿಗೆ ‘ವಿಪ್’ ಜಾರಿ
Update: 2021-12-17 18:34 IST
ಬೆಳಗಾವಿ, ಡಿ. 17: ವಿವಾದಾಸ್ಪದ ಮತಾಂತರ ನಿಷೇಧ ವಿಧೇಯಕ ಸೇರಿದಂತೆ ಇನ್ನಿತರ ವಿಚಾರಗಳು ವಿಧಾನಸಭೆಯಲ್ಲಿ ಚರ್ಚೆಗೆ ಬರುವ ಹಿನ್ನೆಲೆಯಲ್ಲಿ ಡಿ.20ರಿಂದ 24ರವರೆಗೆ ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು ಅಧಿವೇಶನ ಕಲಾಪದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ವಿಪ್ ಜಾರಿ ಮಾಡಲಾಗಿದೆ.
ಶುಕ್ರವಾರ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ.ಅಜಯ್ ಸಿಂಗ್ ಅವರು ಪಕ್ಷದ ಎಲ್ಲ ಶಾಸಕರು ತಪ್ಪದೆ ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ವಿಪ್ ಜಾರಿ ಮಾಡಿದ್ದಾರೆ.