×
Ad

ಎಸ್ಟಿ ಸಮುದಾಯಕ್ಕೆ ಶೇ.7.5 ಮೀಸಲಾತಿ ತಕ್ಷಣ ಜಾರಿಗೆ ಸಿಎಂಗೆ ಮನವಿ

Update: 2021-12-17 19:43 IST

ಬೆಳಗಾವಿ, ಡಿ. 17: ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಶೇ.7.5ರಷ್ಟು ಮೀಸಲಾತಿ ತಕ್ಷಣವೇ ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ನಾಯಕ ಸಮಾಜದ ಸಮಾನ ಮನಸ್ಕರ ತಂಡ ಮನವಿ ಸಲ್ಲಿಸಿತು.

ಶುಕ್ರವಾರ ಸಿಎಂ ಅವರನ್ನು ಖುದ್ದು ಭೇಟಿ ಮಾಡಿದ ನಿಯೋಗವು, ಎಸ್ಟಿ ಸಮುದಾಯಕ್ಕೆ ಶೇ.7.5 ಮೀಸಲಾತಿ ವಿಚಾರವನ್ನು ಬೆಳಗಾವಿ ಸದನದಲ್ಲಿ ಚೆರ್ಚೆ ಮಾಡಬೇಕು. ಶೇ.7.5 ಮೀಸಲಾತಿ ವಿಚಾರವನ್ನು ತ್ರಿಸದಸ್ಯ ಸಮಿತಿಯಿಂದ ಹೊರಗಿಡಬೇಕು. ಕೂಡಲೇ ಶೇ.7.5 ಮೀಸಲಾತಿಯನ್ನು ತಕ್ಷಣ ಜಾರಿ ಮಾಡಬೇಕು. ನಕಲಿ ಜಾತಿ ಪ್ರಮಾಣ ಪತ್ರದ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿತು.

ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈಗ ಮೀಸಲಾತಿ ಜಾರಿಗೆ ಕಾಲ ಸನ್ನಿಹಿತವಾಗಿದೆ ಎಂದು ಭರವಸೆ ನೀಡಿದರು. ಈ ವೇಳೆ ನಾಯಕ ಸಮಾಜದ ಸಮಾನ ಮನಸ್ಕರು ಕೇವಲ ಭರವಸೆ ನೀಡಿದರೆ ಸಾಲದು, ಇದು ಜಾರಿಯಾಗದಿದ್ದರೆ ಯಾವುದೇ ಕಾರಣಕ್ಕೂ ನಾಯಕ ಸಮಾಜದ ಹೋರಾಟ ನಿಲ್ಲುವುದಿಲ್ಲ. ನಿರಂತರವಾಗಿ ಹೊಸ ಮಾದರಿ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. 

ಈ ವೇಳೆ ರಮೇಶ್ ಹಿರೇಜಂಬೂರು, ರಜನಿ ಎಂ.ಆರ್., ಮಾರಣ್ಣ ಪಾಳೇಗಾರ್, ಭರತ್, ಶುಭ ವೇಣುಗೋಪಾಲ್, ಭಾರತಿ ನಾಯಕ್, ಕುಪ್ಪೂರು ಶ್ರೀಧರ್, ಕವಿತಾ, ಸುಧೀರ್ ಹುಳ್ಳೊಳ್ಳಿ ಮತ್ತಿತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News